ಛತ್ರಕೇರಿಯ ಗಣಪತಿ ವಿಸರ್ಜನೆಗೆ ಕೌಂಟ್ ಡೌನ್ - ಈ ಬಾರಿ ವಿಶೇಷ ಏನು ಗೊತ್ತಾ..!?
ಸಾಂಸ್ಕೃತಿಕ ವೈಭವವನ್ನು ಎತ್ತಿ ತೋರಿಸುವ ಏಕೈಕ ಗಣೇಶೋತ್ಸವ ಸಮಿತಿ
ತೀರ್ಥಹಳ್ಳಿ : ಪಟ್ಟಣದ ಪ್ರತಿಷ್ಠಿತ ಗಣೇಶೋತ್ಸವಗಳಲ್ಲಿ
ಒಂದಾಗಿರುವ ಛತ್ರಕೇರಿಯ ಸಿದ್ದಿವಿನಾಯಕ ಯುವಕ ಸಂಘದ 43 ನೇ ವರ್ಷದ ಗಣೇಶೋತ್ಸವದ ಅದ್ದೂರಿ ವಿಸರ್ಜನಾ ಮೆರವಣಿಗೆಗೆ ಕೌಂಟ್ ಡೌನ್ ಶುರುವಾಗಿದೆ.
15 ದಿನಗಳ ಪರ್ಯಂತ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಿರುವ ಸಿದ್ದಿವಿನಾಯಕ ಯುವಕ ಸಂಘದವರು ಇಂದು ಅತ್ಯಂತ ವಿಜೃಂಭಣೆಯಿಂದ ವಿಸರ್ಜನೆ ಮಾಡಲು ತೀರ್ಮಾನಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನೆಡೆಯಲಿದ್ದು ಆ ನಂತರ ವಿಸರ್ಜನಾ ಮೆರವಣಿಗೆ ನೆಡೆಯಲಿದೆ.
ವಿಸರ್ಜನಾ ಮೆರವಣಿಗೆಯಲ್ಲಿ ಹುಲಿವೇಷ, ಬೊಂಬೆ ಕುಣಿತ, ಚಂಡೆ ಜೊತೆಗೆ ಪಿಯಾನೋ, ವೀರಗಾಸೆ, ಡೊಳ್ಳುಕುಣಿತ,
ನಾಸಿಕ್ ಬ್ಯಾಂಡ್, ಸೇರಿದಂತೆ ಹಲವು ಆಕರ್ಷಣೆಗಳ ಜೊತೆಗೆ ಸಿಡಿಮದ್ದುಗಳ ಜೇಂಕಾರ ಇರಲಿದೆ.. ಅಲ್ಲದೆ ಸಾವಿರಾರು ಜನರು ಸೇರುವ ನಿರೀಕ್ಷೆ ಇದ್ದು ಇದೊಂದು ಹೆಮ್ಮೆಯ ಸಾಂಸ್ಕೃತಿಕ ವೈಭವವನ್ನು ಎತ್ತಿ ತೋರಿಸುವ ಏಕೈಕ ಗಣೇಶೋತ್ಸವ ಸಮಿತಿ ಇದಾಗಿದೆ..
ಅಧಿಕಾರಿಗಳ ಮೆಚ್ಚಿನ ಗಣಪ
ತೀರ್ಥಹಳ್ಳಿಯಲ್ಲಿ ಹಲವಾರು ಗಣೇಶೋತ್ಸವಗಳು ನಡೆಯುತ್ತದೆ. ಆದರೆ ಅಧಿಕಾರಿಗಳ ಮೆಚ್ಚಿನ ಗಣಪ ಎಂದು ಛತ್ರಕೇರಿಯ ಸಿದ್ಧಿ ವಿನಾಯಕ ಯುವಕ ಸಂಘದ ಗಣಪತಿ
ಪ್ರಸಿದ್ಧಿ ಪಡೆದಿದೆ. ಗಣೇಶೋತ್ಸವದ ಮೆರವಣಿಗೆಯಲ್ಲಿ ಡಿಜೆ ಯನ್ನ ಬಳಕೆ ಮಾಡದೆ ಸಾಂಸ್ಕೃತಿಕ ಪರಂಪರೆಯನ್ನ ತೋರಿಸುವಂತಹ ಈ ಗಣಪ ಅಧಿಕಾರಿಗಳ ಪಾಲಿನ ಮೆಚ್ಚಿನ ಗಣಪನಾಗಿದ್ದಾನೆ.. ಈ ಬಾರಿ ಅಧಿಕಾರಿಗಳಿಂದ ಏನಾದರೂ ವಿಶೇಷತೆ ಇದೆಯಾ? ಕಾದು ನೋಡಬೇಕಿದೆ..
ವಿಸರ್ಜನಾ ಮೆರವಣಿಗೆ ಹೇಗಿರಲಿದೆ?
ಛತ್ರಕೇರಿಯಿಂದ ಹೊರಡುವ ಮೆರವಣಿಗೆ ಗಾಂಧಿಚೌಕ, ಆಗುಂಬೆ ಬಸ್ ನಿಲ್ದಾಣ, ದೊಡ್ಡಮನೆಕೇರಿ, ಸೀಬಿನಕೆರೆ, ಪುನಃ ಆಗುಂಬೆ ಬಸ್ ನಿಲ್ದಾಣ, ಮಸೀದಿ ರಸ್ತೆ, ಸೊಪ್ಪುಗುಡ್ಡೆ, ಮಾರಿಕಾಂಬಾ ದೇವಸ್ಥಾನ ರಸ್ತೆ, ಗಾಂಧಿಚೌಕ, ಕೊಪ್ಪ ಸರ್ಕಲ್, ಕುಶಾವತಿ, ಕೆ. ಸಿ ರಸ್ತೆ, ಮೀಲ್ಕೆರಿ ರಸ್ತೆ, ಪುನಃ ಛತ್ರಕೇರಿ ಗಾಂಧಿಚೌಕದ ಮೂಲಕ ರಥಬೀದಿಗೆ ಬಂದು ತುಂಗಾ ನದಿಯಲ್ಲಿ ಸ್ವಾಮಿಯ ವಿಸರ್ಜನೆ ನೆಡೆಯಲಿದೆ.
ಈ ಅದ್ದೂರಿ ವಿಸರ್ಜನಾ ಮೆರವಣಿಗೆಯಲ್ಲಿ ತೀರ್ಥಹಳ್ಳಿಯ ಸರ್ವರೂ ಆಗಮಿಸಲು ಸಮಿತಿಯವರು ಕೋರಿದ್ದಾರೆ.
Tags:
ಗಣೇಶೋತ್ಸವ