ತೀರ್ಥಹಳ್ಳಿಯ ರಥಬೀದಿಯಲ್ಲಿ ಬೈಕ್ ಕಳ್ಳತನ - ಆರೋಪಿಗಳ ಬಂಧನ..!
ತೀರ್ಥಹಳ್ಳಿ : ಪಟ್ಟಣದ ರಥಬೀದಿಯ ವೆಂಕಟರಮಣ ದೇವಸ್ಥಾನದ ಎದುರು ನಿಲ್ಲಿಸಿದ್ದಂತಹ ಬೈಕ್ ವೊಂದನ್ನು ಅಗಸ್ಟ್ 24 ರ ಬೆಳ್ಳಂ ಬೆಳಗ್ಗೆ ಕಳ್ಳರು ಬೈಕ್ ಕದ್ದು ಪರಾರಿಯಾಗಿದ್ದರು.. ಇವರು ಬೈಕ್ ಕದ್ದಂತಹ ಸ್ಥಳ ಸುಮಾರು ನೂರು ಮೀಟರ್ ಅಂತರದಲ್ಲಿಯೇ ಪೊಲೀಸ್ ಠಾಣೆ ಇರುವುದರಿಂದ ಬಾರಿ ಚರ್ಚೆಗೀಡು ಮಾಡಿತ್ತು..
ಆದರೆ ಈಗ ಬೈಕ್ ಕದ್ದ ಇಬ್ಬರು ಕಳ್ಳರನ್ನು ಮಾಲಿನ ಸಮೇತ ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.. ಬೈಕ್ ಕದ್ದ ನಂತರ ತೀರ್ಥಹಳ್ಳಿಯ ವಿವಿಧ ಭಾಗಗಳಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿತ್ತು. ನಂತರ ಶಿವಮೊಗ್ಗ ತಲುಪಿರಬಹುದು ಎಂಬ ಅನುಮಾನದಿಂದ ತನಿಖೆ ನಡೆಸಲು ಮುಂದಾದ ತೀರ್ಥಹಳ್ಳಿ ಪೊಲೀಸರು ಕಡೆಗೂ ಇಬ್ಬರು ಕಳ್ಳರನ್ನ ಬೈಕಿನ ಸಮೇತ ಬಂಧಿಸಿದ್ದಾರೆ..
ಶಿವಮೊಗ್ಗ ಮೂಲದ ಕಳ್ಳರು ಎಂದು ತಿಳಿದುಬಂದಿದ್ದು ಇಬ್ಬರೂ ಕೂಡ ಅಪ್ರಾಪ್ತರು ಎಂಬುದಾಗಿ ತಿಳಿದುಬಂದಿದೆ.. ಇಬ್ಬರನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ..
ಬೈಕ್ ಕದ್ದಂತಹ ಪ್ರಕರಣವನ್ನು ಭೇದಿಸಿದಂತಹ ತೀರ್ಥಹಳ್ಳಿ ಪೊಲೀಸರ ಕಾರ್ಯಾಚರಣೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..
ವಿಶೇಷ ಸೂಚನೆ : ಬೈಕ್ ಕದ್ದಂತಹ ಆರೋಪಿಗಳು ಅಪ್ರಾಪ್ತರಾಗಿರುವ ಕಾರಣದಿಂದ ಅವರ ಫೋಟೋವನ್ನು ಬಳಕೆ ಮಾಡಿರುವುದಿಲ್ಲ..
Tags:
ತೀರ್ಥಹಳ್ಳಿ ಸುದ್ದಿ