ತೀರ್ಥಹಳ್ಳಿ ಬಸ್‌ಸ್ಟ್ಯಾಂಡ್ ಬಳಗದ ವತಿಯಿಂದ 24 ನೇ ವರ್ಷದ ಗಣೇಶೋತ್ಸವ ಆಚರಣೆ - ಏನೆಲ್ಲಾ ವಿಶೇಷ ಇರುತ್ತೆ? Ganeshotsava

ತೀರ್ಥಹಳ್ಳಿ ಬಸ್‌ಸ್ಟ್ಯಾಂಡ್ ಬಳಗದ ವತಿಯಿಂದ 24 ನೇ ವರ್ಷದ ಗಣೇಶೋತ್ಸವ ಆಚರಣೆ - ಏನೆಲ್ಲಾ ವಿಶೇಷ ಇರುತ್ತೆ? 

ತೀರ್ಥಹಳ್ಳಿ : ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಆವರಣದಲ್ಲಿ ಬಸ್‌ ಸ್ಟ್ಯಾಂಡ್ ಬಳಗದ ವತಿಯಿಂದ 24 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ದಿನಾಂಕ 14-09-2026 ರಿಂದ 24-09-2026 ರ ವರೆಗೆ 11 ದಿನಗಳ ಪರ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬಸ್‌ಸ್ಟಾಂಡ್ ಸಾರ್ವಜನಿಕ ಗಣೇಶೋತ್ಸವದ ಸಮಿತಿಯ ನೂತನ ಅಧ್ಯಕ್ಷರಾಗಿ ಬೆಟ್ಟಮಕ್ಕಿ ಸೂರ್ಯಕಾಂತ್ ನೇಮಕಗೊಂಡಿದ್ದಾರೆ.

ಏನೆಲ್ಲಾ ವಿಶೇಷ ಕಾರ್ಯಕ್ರಮ 

18-09-2026 ರಂದು ರಾತ್ರಿ 8 ಗಂಟೆಗೆ ಧ್ರುವ ತಾರೆ ಮ್ಯೂಸಿಕಲ್ ಪ್ರಶಾಂತ್ ಬಾಬು ಉತ್ತಮೇಶ್ವರ - ಕೊಪ್ಪ ಇವರಿಂದ ಆರ್ಕೆಸ್ಟ್ರಾ ಕಾರ್ಯ ಕ್ರಮ 

20-09-2026 ರಂದು ರಾತ್ರಿ 8 ಗಂಟೆಗೆ ಸನ್ನಿಧಿ ಕಲಾವಿದರು, ಕಡೆಕಾರ್ ಇವರಿಂದ “ಅಪ್ಪೆ ಮಂತ್ರ ದೇವತೆ' ಎಂಬ ನಾಟಕ ಪ್ರದರ್ಶನ.

ದಿನಾಂಕ 22-09-2026 ನೇ ಮಂಗಳವಾರ ದಂದು ಬೆಳಿಗ್ಗೆ 10-30 ಕ್ಕೆ ಗಣಹೋಮ ಮತ್ತು ಸಾರ್ವನಿಕ ಸತ್ಯನಾರಾಯಣ ಪೂಜೆ ನಂತರ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಇದೇ ದಿನ ರಾತ್ರಿ 7-30 ಕ್ಕೆ ರಾಮದಾಸ್ ಮಿತ್ರ ಮಂಡಳಿ, ಬಾಳಗಾರು ಇವರಿಂದ "ರಂಪರಾಮಾಯಣ' ಎಂಬ ಹಾಸ್ಯ ನಾಟಕ ಏರ್ಪಡಿಸಲಾಗಿದೆ.

ದಿನಾಂಕ 24-09-2026 ರಂದು ಮಂಗಳ ವಾದ್ಯ ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ವಿವಿಧ ವೇಷಭೂಷಣಗಳಿಂದ ಶ್ರೀ ಮಹಾಗಣಪತಿಯ ಅದ್ದೂರಿಯ ರಾಜಬೀದಿ ಉತ್ಸವದೊಂದಿಗೆ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.





Previous Post Next Post