ಹರಳಿಮಠ ಬಳಿ ಕಾಡುಕೋಣ ಕೊಂದ ಪ್ರಕರಣ - ಇಂದು ಕಾಡುಕೋಣದ ತಲೆ ಪತ್ತೆ..!
ತೀರ್ಥಹಳ್ಳಿ: ತಾಲ್ಲೂಕಿನ ಹರಳಿಮಠ ಬಳಿ ದುಷ್ಕರ್ಮಿಗಳು ಕಾಡುಕೋಣವನ್ನು ಕೊಂದು ಮಾಂಸ ತೆಗೆದುಕೊಂಡು ಹೋಗಿದ್ದ ಪ್ರಕರಣದಲ್ಲಿ ಇಂದು ಕಾಡುಕೋಣ ತಲೆ ಪತ್ತೆಯಾಗಿದೆ.. ಸುಮಾರು 500 ಮೀಟರ್ ದೂರದಲ್ಲಿ ಕಾಡುಕೋಣ ತಲೆ ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ..
ಶುಕ್ರವಾರ ಬೆಳಗಿನ ಜಾವ ಸಂದರ್ಭದಲ್ಲಿ ಕಾಡುಕೋಣವನ್ನು ತೀರ್ಥಹಳ್ಳಿ - ಬಸವಾನಿ ರಸ್ತೆ ಬದಿಯಲ್ಲೇ ಹೊಡೆದು ಮಾಂಸ ತೆಗೆದುಕೊಂಡು ಅದರ ಅವಶೇಷವನ್ನು ಬಿಟ್ಟು ಹೋಗಲಾಗಿತ್ತು.. ಸ್ಥಳಕ್ಕೆ ಡಿ ಎಫ್ ಓ, ಅರಣ್ಯ ಇಲಾಖೆ ಅಧಿಕಾರಿಗಳು, ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು..ಆದರೆ ಈಗ ಕಾಡುಕೋಣದ ಅವಶೇಷ ಪತ್ತೆಯಾದ ಜಾಗದಿಂದ 500 ಮೀಟರ್ ದೂರದಲ್ಲಿ ಕಾಡುಕೋಣ ತಲೆ ಪತ್ತೆಯಾಗಿದ್ದು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಕಾಣಿಸಲಿಲ್ಲವೇ? ಅಥವಾ ಮತ್ತೆ ರಾತ್ರಿ ವೇಳೆ ಯಾರಾದರೂ ತಂದು ಹಾಕಿದರೆ? ಎಂಬ ಮಾತು ಈಗ ಸ್ಥಳೀಯರಿಂದ ಕೇಳಿ ಬರುತ್ತಿದೆ..
ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ದುಷ್ಕರ್ಮಿಗಳನ್ನು ಹಿಡಿಯುತ್ತಾರ? ಕಾದು ನೋಡಬೇಕಿದೆ..
Tags:
ತೀರ್ಥಹಳ್ಳಿ ಸುದ್ದಿ