ಕುಸಿದು ಬಿದ್ದು ಶಾಲಾ ವಿದ್ಯಾರ್ಥಿ ಸಾ*ವು
ಶಿವಮೊಗ್ಗ : ಶಾಲೆಯಲ್ಲಿ ಸ್ನೇಹಿತರ ಜೊತೆಗೆ ಚೆಸ್ ಆಟ ಆಡುತ್ತಿದ್ದ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆಯನೂರು ಸಮೀಪದ ತಮಡಿಹಳ್ಳಿಯಲ್ಲಿ ನಡೆದಿದೆ..
ಮೃತಪಟ್ಟ ವಿದ್ಯಾರ್ಥಿಯನ್ನು ವಿನಯ್ (15 ವರ್ಷ ) ಎಂದು ಗುರುತಿಸಲಾಗಿದ್ದು ತಮ್ಮಡಿಹಳ್ಳಿಯ ಸರ್ಕಾರಿ ಹೈಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.. ಸ್ನೇಹಿತರ ಜೊತೆ ಚೆಸ್ ಆಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾನೆ.. ತಕ್ಷಣವೇ ಶಿಕ್ಷಕರು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದರು ಸಹ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ..
ಈ ಸಂಬಂಧ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..
Tags:
ಶಿವಮೊಗ್ಗ ಸುದ್ದಿ