ತೀರ್ಥಹಳ್ಳಿಯ ಲಾಡ್ಜ್ ನಿಂದ ಕಣ್ಮರೆಯಾದ ಬೆಂಗಳೂರಿನ ಸಿವಿಲ್ ಕಂಟ್ರಾಕ್ಟರ್!
ತೀರ್ಥಹಳ್ಳಿ : ಇಲ್ಲಿನ ಖಾಸಗಿ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದ ಬೆಂಗಳೂರಿನ ಸಿವಿಲ್ ಕಂಟ್ರಾಕ್ಟರ್ ಒಬ್ಬರು ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೊಡಿಗೆಹಳ್ಳಿಯ ನಿವಾಸಿಯಾಗಿರುವ ಅನಿಲ್ ಬಿ ರಾಮ್’ದಾಸ್ (55) ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಆಗಸ್ಟ್ 14 ರಂದು ತೀರ್ಥಹಳ್ಳಿಗೆ ಆಗಮಿಸಿ ಖಾಸಗಿ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದರು. ಮಾರನೇ ದಿನ ಆಗಸ್ಟ್ 15 ರ ಬೆಳಗಿನ ಜಾವ 5.30 ರ ಸುಮಾರಿಗೆ ಲಾಡ್ಜ್ ಕೊಠಡಿಯಿಂದ ಹೊರಹೋದವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಚಹರೆ : ಕಾಣೆಯಾದ ವ್ಯಕ್ತಿಯು 5.4 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಬ್ಲೂ ಜೀನ್ಸ್ ಪ್ಯಾಂಟ್, ಬ್ಲೂ ಶರ್ಟ್ ಧರಿಸಿರುತ್ತಾರೆ.
ಇವರ ಸುಳಿವು ಪತ್ತೆಯಾದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ