ಬಿಂತ್ಲಾದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ - ಕಿಮ್ಮನೆ ರತ್ನಾಕರ್
ತೀರ್ಥಹಳ್ಳಿ : ಕಡೆಮನೆ ಗ್ರಾಮಕ್ಕೆ ರಸ್ತೆ ಮಾಡಿಸುವುದಾಗಿ ಹೇಳಿ ಬಿಂತ್ಲಾದ ತಮ್ಮ ಜಾಗದವರೆಗೆ ಮಾತ್ರ 2.5 ಕೋಟಿ ರೂ ವೆಚ್ಚದಲ್ಲಿ ಶಾಸಕರು ರಸ್ತೆ ಮಾಡಿಸಿಕೊಂಡಿದ್ದಾರೆ.. ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಬೇಕಾದವರು ತಮ್ಮ ತೋಟಕ್ಕಾಗಿ ಕೆಲಸ ಮಾಡಬೇಕಾ? ಗೋ ಶಾಲೆ ಮಾಡಬೇಕು ಎಂದು ಇಟ್ಟುಕೊಂಡಿದ್ದ ಜಾಗವನ್ನು ಇವರು ಖರೀದಿ ಮಾಡಿದ್ದಾರೆ.. ಈ ಎಲ್ಲಾ ಕಾರಣದಿಂದ ಆಗಸ್ಟ್ 24 ಅಥವಾ ಸೆಪ್ಟೆಂಬರ್ 7 ರ ಎರಡು ದಿನದಲ್ಲಿ ಒಂದು ದಿನ ಅಲ್ಲಿಂದ ಪಾದಯಾತ್ರೆ ಮಾಡುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದರು..
ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 10 ಎಕರೆ ಕಾಡನ್ನ ತಮ್ಮ ಜಾಗಕ್ಕಾಗಿ ಆರಗ ಜ್ಞಾನೇಂದ್ರ ನಾಶಪಡಿಸಿದ್ದಾರೆ.. ತೋಟಕ್ಕಾಗಿಯೋ ಅಥವಾ ಹೋಂ ಸ್ಟೇ ಮಾಡಲೋ ಈಗ ತಯಾರಿ ಮಾಡಿದ್ದಾರೆ. ಇಂತಹದನ್ನ ಮಾಡಿದ್ದಕ್ಕೆ ಕ್ಷೇತ್ರ ಜನರಲ್ಲಿ ಕ್ಷಮೆ ಕೇಳಬಾರದ? ಎಂದು ಪ್ರಶ್ನೆ ಮಾಡಿದರು. ಕಡೆಮನೆ ಮಕ್ಕಳು ತಮ್ಮ ಊರಿಗೆ ಓಡಾಟ ನಡೆಸಲು ರಸ್ತೆ ಬೇಕೆಂದು ಪ್ರತಿಭಟನೆ ನಡೆಸಿದರು ಈಗ ನೆರೆ ಬಂದಾಗ ಆ ಸೇತುವೆ ಮತ್ತೆ ಮುಳುಗಡೆಯಾಗಿದೆ..ಮಕ್ಕಳು ಅದೇ ರಸ್ತೆಯಲ್ಲಿ ಓಡಾಟ ಮಾಡಬೇಕಿದೆ.. ಬಗರ್ ಹುಕುಂ ಜಾಗದ ಬಗ್ಗೆ ಬಾರಿ ಮಾತನಾಡುವ ಶಾಸಕರು ಬಗರ್ ಹುಕುಂ ರೈತರ ಪರವಾಗಿ ಇಲ್ಲ. ಬಗರ್ ಹುಕುಂ ಮಾಡಿರುವ ಬಿಜೆಪಿಯವರ ಪರವಾಗಿ ಇದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು..
1994 ರಿಂದ ಸತತವಾಗಿ 15 ವರ್ಷಗಳ ಕಾಲ ಶಾಸಕರಾಗಿದ್ದಾರೆ. ಮನುಷ್ಯ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಪೂರಕವಾದ ವಿವೇಕವನ್ನ, ತಮ್ಮ ಸ್ಥಾನಕ್ಕೆ ಸಲ್ಲಿಸಬೇಕಾದ ಗೌರವವನ್ನ ಮಾಡಬೇಕು..ಅದನ್ನು ಶಾಸಕರು ಕಲಿತೆ ಇಲ್ಲ.. ಇವರಿಗೆ ಬೆನಕ ಭಟ್ಟರು, ಪುರುಷೋತ್ತಮ ರಾಯರು, ನರಸಿಂಹರಾಯರು ಹೇಳಿ ಕೊಡಲೇ ಇಲ್ವಾ ಗೊತ್ತಿಲ್ಲ. ಅಥವಾ ಅವರು ಹೇಳಿಕೊಟ್ಟರೂ ಸಹ ಇವರ ಸರಿಯಾಗಿ ಕಲಿಯಲಿಲ್ವ ಗೊತ್ತಿಲ್ಲ..ಎಲ್ಲೋ ಒಂದು ಕಡೆ ಆ ನ್ಯೂನ್ಯತೆ ಇದೆ ಎಂದು ಕಾಣಿಸುತ್ತದೆ.. ಇತರೆಯವರ ತಪ್ಪುಗಳನ್ನು ಹುಡುಕುವ ಶಾಸಕರಿಗೆ ನಾನು ಏನು ತಪ್ಪು ಮಾಡುತ್ತೇನೆ ಎಂದು ತಿಳಿಯುತ್ತಿಲ್ಲ ಎಂದರು..
ಹುಲಿಕಲ್ ಘಾಟಿಯ ಕಾಮಗಾರಿಯ ಟೆಂಡರ್ ಅನ್ನು ತಮ್ಮ ಅಳಿಯ ಸಿವಿ ಚಂದ್ರಶೇಖರ್ ಅವರಿಗೆ ಮಾಡಿಸಿಕೊಟ್ಟರು.. ಕಾಮಗಾರಿಯ ವೇಳೆ ಅವಘಡದಿಂದ ಮೂವರು ಸಾವನ್ನಪ್ಪಿದರು.. ಆ ವೇಳೆ ನಾನೇ ಶಾಸಕನಾಗಿದ್ದರೆ ಆರಗ ಜ್ಞಾನೇಂದ್ರ ಪ್ರತಿಭಟನೆ ನಡೆಸುತ್ತಿದ್ದರು.. ಗುತ್ತಿಗೆದಾರರು ಒಂದು ವೇಳೆ ಶರೀಫ್ ಆಗಿದ್ದರೆ ಕಥೆ ಗೋವಿಂದ ಆಗುತ್ತಿತ್ತು.. ತೀರ್ಥಹಳ್ಳಿ ಸೇರಿದಂತೆ ರಾಜ್ಯವೇ ಬಂದ್ ಮಾಡಲಾಗುತ್ತಿತ್ತು.. ಅಥವಾ ಕಾಂಗ್ರೆಸ್ ನವರೇ ಯಾರಾದರೂ ಗುತ್ತಿಗೆದಾರರಾಗಿದ್ದರು ಸಹ ಆರಗ ಜ್ಞಾನೇಂದ್ರ ಸುಮ್ಮನೆ ಅಂತೂ ಇರುತ್ತಿರಲಿಲ್ಲ.. ಆದರೆ ನಾನೆಲ್ಲೂ ಆ ರೀತಿ ಮಾಡಿಲ್ಲ ರಾಜಕೀಯವನ್ನು ಇಂತಹ ವಿಷಯದಲ್ಲಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು..
ಇನ್ನು ಅಭಿವೃದ್ಧಿ ಹಾಗೂ ಸಿದ್ದಾಂತ ಈ ಎರಡರ ವಿಷಯದಲ್ಲೂ ಚರ್ಚೆಗೆ ನಾನು ಸಿದ್ಧ.. ಅವರ 15 ವರ್ಷದ ಅಭಿವೃದ್ಧಿ ಹಾಗೆ ನನ್ನ 10 ವರ್ಷದ ಅಭಿವೃದ್ಧಿ ಬಗ್ಗೆ ಚರ್ಚೆ ನೆಡೆಸಲಿ.. ನನ್ನ 10 ವರ್ಷ ಅಧಿಕಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಆಡಳಿತದಲ್ಲಿ ಇದ್ದವು.. ಬಿಜೆಪಿ ಆಡಳಿದಲ್ಲೂ ಸಹ ನಾನು ಹಣ ತಂದಿದ್ದೇನೆ. ಇವರಿಗೆ ಆ ತಾಕತ್ತು ಬೇಕು.. ಆಡಳಿತ ಪಕ್ಷ ಯಾವುದೇ ಇದ್ದರೂ ಇವರು ಕೇಳದೆ ಹಣ ಯಾರು ಕೊಡುತ್ತಾರೆ. ನಾನು ಸೋತಿದ್ದು ಬೇರೆ ಬೇರೆ ಕಾರಣಾಂತರಗಳಿಂದ ನಾನು ಹಾಗೂ ಆರ್ ಮಂಜುನಾಥಗೌಡರು ಒಂದಾಗಿದ್ದು ಚುನಾವಣೆ ಹತ್ತಿರ ಬಂದಾಗ, ಆದರೆ ಕೆಳಮಟ್ಟದ ಕಾರ್ಯಕರ್ತರು ಒಂದಾಗಿರಲಿಲ್ಲ ಹಾಗಾಗಿ ಸೋಲಬೇಕಾಯಿತು.. ನಮ್ಮಲ್ಲಿ ಮತ್ತೂರ್ವ ನಾಯಕರು ಎಂಬುದಾಗಿ ಇದ್ದರು ಆದರೆ ಅಲ್ಲಿ ನಾಯಕರೇ ಇಲ್ಲವಲ್ಲಾ.. ಆದರೆ ಈಗ ಅದಿ ಯಾರು ಹೆದ್ದೂರು ಮಂಗ ಓಡಾಡುತ್ತಿದೆ ಅದಕ್ಕೇನು ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು..
ಅಡಕೆ ವಿಚಾರದಲ್ಲಿ ಮಾತನಾಡುವ ಸಲುವಾಗಿ ಕೇಂದ್ರದ ಗೃಹಮಂತ್ರಿಗಳ ಬಳಿ ನಮ್ಮ ಶಾಸಕರು ಹೋಗಿದ್ದಾರೆ.. ಗೃಹಮಂತ್ರಿಗಳು ಗಡಿಪಾರು ಆದವರು ಇವರಿಗೆ ಅವರು ಆದರ್ಶ.. ಇಲ್ಲಿ ಬಂದು ನಂದಿತಾ ಪ್ರಕರಣದಲ್ಲಿ ವೈಕುಂಠ ಸಮಾರಾಧನೆ ಮಾಡಿದರಲ್ಲ.. ನಮ್ಮ ಶಾಸಕರು ಇವತ್ತು ಹೋಗಿದ್ದಾರಲ್ಲ ತನಿಖೆ ನಡೆಸಲಿ, ನಂದಿತಾ ಪ್ರಕರಣವನ್ನು ಸಿಬಿಐಗೆ ವಹಿಸಲು ಹೇಳಲಿ ಎಂದರು..
ರಾಜ್ಯ ಸರ್ಕಾರದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂಬ ಪತ್ರಕರ್ತರ ಪ್ರೆಶ್ನೆಗೆ ಅದು ಪಕ್ಷದ ತೀರ್ಮಾನ, ನಾನೊಬ್ಬ ಕಾರ್ಯಕರ್ತ ಅಷ್ಟೇ.. ತೀರ್ಥಹಳ್ಳಿಯಲ್ಲಿ ನಾನು ಸಕ್ರಿಯವಾಗಿ ಇರಲು ಆರ್ಥಿಕ ಮೂಲ ಒದಗಿಸಿದ್ದು ಅದರಲ್ಲೂ 99% ಬ್ರಾಹ್ಮಣ ಸಮಾಜ... ಅವರಿಂದಲೇ ಇಲ್ಲಿಯವರೆಗೆ ನಾನು ರಾಜಕೀಯ ಮಾಡುತ್ತಿದ್ದೇನೆ. ಅವರ ಮೇಲೆ ನನಗೆ ಅಭಿಮಾನ ಹಾಗೆ ಗೌರವ ಇದೆ. ಪಕ್ಷದ ವೇದಿಕೆಯಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು..
ಈ ಸಂದರ್ಭದಲ್ಲಿ ನಾರಾಯಣರಾವ್, ಬಾಳೆಹಳ್ಳಿ ಪ್ರಭಾಕರ್, ಗೀತಾ ರಮೇಶ್, ಮಂಜುಳಾ ನಾಗೇಂದ್ರ, ಆದರ್ಶ ಹುಂಚದಕಟ್ಟೆ, ಶ್ರೇಯಸ್, ಜೈಕರ್ ಶೆಟ್ಟಿ, ವಿಲಿಯಮ್ ಮಾರ್ಟೀಸ್ ಸೇರಿ ಹಲವರು ಉಪಸ್ಥಿತರಿದ್ದರು.
Tags:
ಕಿಮ್ಮನೆ ರತ್ನಾಕರ್