ಕಾರೆಮನೆ ಸೇತುವೆ ಬಳಿ ವಾಹನ ಪಲ್ಟಿ - ಓರ್ವನಿಗೆ ಗಂಭೀರ ಗಾಯ . Kattehaklu

ಕಾರೆಮನೆ ಸೇತುವೆ ಬಳಿ ವಾಹನ ಪಲ್ಟಿ - ಓರ್ವನಿಗೆ ಗಂಭೀರ ಗಾಯ 

ರಸ್ತೆ ಬದಿಯಲ್ಲಿ ಕಾಡು ಬೆಳೆದಂತೆ ಇರುವ ಹೊಳಗಳು - ಗ್ರಾಮಪಂಚಾಯಿತಿ ಆಡಳಿತದ ನಿರ್ಲಕ್ಷ್ಯ ಎಂದು ಸ್ಥಳೀಯರ ಆರೋಪ
ತೀರ್ಥಹಳ್ಳಿ : ಕಾರೆಮನೆ ಸೇತುವೆ ಬಳಿ ರಸ್ತೆ ತಿರುವು ಇದ್ದು ವಾಹನಗಳು ಏಕಾಏಕಿ ಬರುವುದರಿಂದ ಪ್ರತಿ ನಿತ್ಯ ಅಪಘಾತಗಳು ಆಗುತ್ತಿವೆ. ನಿನ್ನೆ ತಡ ರಾತ್ರಿ ಸಹ ಇದೆ ರೀತಿ ಅಪಘಾತವಾಗಿದ್ದು ಕಾರೊಂದು ಸೇತುವೆಯ ಕೆಳ ಭಾಗಕ್ಕೆ ಬಿದ್ದಿದ್ದು ಕಾರಿನಲ್ಲಿದ್ದ ಚಾಲಕನಿಗೆ ಗಂಭೀರ ಗಾಯವಾಗಿದ್ದು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ತೀರ್ಥಹಳ್ಳಿ ತಾಲೂಕಿನ ಸಾಲ್ಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲು ಸಮೀಪದ ಕಟಗಾರು ಗ್ರಾಮದ ಕಾರೆಮನೆ ಬಳಿ ರಸ್ತೆ ತಿರುವಿನಲ್ಲಿ ಕಾಡು ಬೆಳೆದಂತೆ ಹೊಳ ಬೆಳೆದಿದ್ದು ಎದುರಿನಿಂದ ಬರುವ ಯಾವುದೇ ವಾಹನಗಳು ಕಾಣದಂತೆ ಆಗಿದೆ.. ಈ ಬಗ್ಗೆ ಸ್ಥಳೀಯರು ಗ್ರಾಮಪಂಚಾಯಿತಿಗೆ ವಿಷಯ ತಿಳಿಸಿದ್ದರು ಅಲ್ಲಿನ ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಈ ರಸ್ತೆಯಲ್ಲಿ ಆಗುತ್ತಿದ್ದು ಇದಕ್ಕೆ ಕಾರಣ ತಿರುವು ಇರುವ ರಸ್ತೆ ಕಾಣಿಸದೆ ಇರುವುದೇ ನೇರ ಕಾರಣ ಎಂದು ಆರೋಪಿಸಲಾಗಿದೆ.. ಕೂಡಲೇ ಸಂಬಂಧಪಟ್ಟ ಗ್ರಾಮಪಂಚಾಯಿತಿ ಅಧಿಕಾರಿಗಳು ರಸ್ತೆ ಬದಿಯಲ್ಲಿ ಇರುವಂತಹ ಹೊಳಗಳನ್ನು ತೆಗೆಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ..
Previous Post Next Post