ಕಿಮ್ಮನೆ ರತ್ನಾಕರ್ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿ ಇದ್ದಾರೆ - ಆರಗ ಜ್ಞಾನೇಂದ್ರ Araga jnanendra

ಕಿಮ್ಮನೆ ರತ್ನಾಕರ್ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿ ಇದ್ದಾರೆ - ಆರಗ ಜ್ಞಾನೇಂದ್ರ 

ತೀರ್ಥಹಳ್ಳಿ : ನನಗೆ ಇತ್ತೀಚಿಗೆ ಕಿಮ್ಮನೆ ರತ್ನಾಕರ ಅವರ ಬಗ್ಗೆ ಸಹನಾಭೂತಿ ಮೂಡಿದೆ. ಅವರ ಮೇಲೆ ಬೇಜಾರಾಗಲಿ ಅಥವಾ ಸಿಟ್ಟಾಗಲಿ ಬರುತ್ತಿಲ್ಲ.. ಅವರು ತಮ್ಮ ಪಕ್ಷದವರನ್ನಾಗಲಿ, ಕುಟುಂಬದವರನ್ನಾಗಲಿ ಸಹಿಸುತ್ತಿಲ್ಲ, ನನ್ನ ಕಥೆ ಬಿಡಿ  ನಾನೊಬ್ಬ ರಾಜಕೀಯ ವಿರೋಧಿ, ಯಾವ ಕಾಮಗಾರಿ ನೋಡಿದರೂ ನಾನೇ ಮಾಡಿದ್ದು ಎನ್ನುತ್ತಾರೆ, ಒಟ್ಟಿನಲ್ಲಿ ಹೇಳುವುದಾದರೆ ಕಿಮ್ಮನೆ ರತ್ನಾಕರ್ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿ ಇದ್ದಾರೆ ಎಂದು ಮಾಜಿ ಗೃಹ ಸಚಿವ, ಕ್ಷೇತ್ರದ ಶಾಸಕರಾದ, ಆರಗ ಜ್ಞಾನೇಂದ್ರ ಹೇಳಿದರು..

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ದೇಶದ ಪ್ರತಿಷ್ಠಿತ ರಾಜಕೀಯ ಪಕ್ಷವೊಂದರ ತಾಲೂಕಿನ ಅಧ್ಯಕ್ಷರನ್ನು ನೋಡಿದರೆ ಅವರಿಗೆ ಮಂಗನ ಕಂಡ ಹಾಗೆ ಆಗುತ್ತದೆ, ಮನುಷ್ಯರನ್ನು ನೋಡಿದರೆ ಮಂಗನ ಹಾಗೆ ಕಾಣಿಸುತ್ತಿದೆ, ಬೇರೆ ಯಾರನ್ನಾದರೂ ನೋಡಿದರೆ ಎಂಜಲು ತಿನ್ನುವವನ ಹಾಗೆ ಕಾಣಿಸುತ್ತದೆ.  ಅವರ ಮನಸ್ಸಿಗೆ ಏನೋ ಆಗಿದೆ.. ಇದೊಂದು ಅಪಾಯಕಾರಿ ಸನ್ನಿವೇಶ.. ಅವರನ್ನ ಯಾರಾದರೂ ತಜ್ಞರ ಬಳಿ ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಮಾಡಿಸುವುದು ಒಳ್ಳೆಯದು.. ನಾನು ಅವರ ಆರೋಗ್ಯ ಹಾಳಾಗಬೇಕು ಅವರಿಗೆ ತೊಂದರೆ ಆಗಬೇಕೆಂದು ಹಾರೈಸುವವನಲ್ಲ.. ಅಂತಹ ರಾಜಕಾರಣ ನಾನು ಮಾಡುವುದಿಲ್ಲ ಎಂದರು..

ನನ್ನ ಮಗನ ಮೇಲೆ ಕಂಪ್ಲೇಂಟ್ ಕೊಡಿಸಿದ್ದಾರೆ, ಅದನ್ನು ನಾನು ನೋಡಿಕೊಳ್ಳುತ್ತೇನೆ.. ಅವರು ಏನೇ ಟೀಕೆ ಮಾಡಿದರು ಅದನ್ನು ಎದುರಿಸುವ ತಾಕತ್ತು ನನಗಿದೆ.. ಈ ತಾಲೂಕಿನಲ್ಲಿ ಇವರ ಹಾಗೆ ಅಲ್ಲಾಡಿಸಿಕೊಂಡು ಬಂದವನಲ್ಲ.. ಜನರ ಜೊತೆಗೆ ಬಂದು ಬದುಕು ಕಟ್ಟಿಕೊಂಡವನು, ಊಟ ಮಾಡಲು ಅನ್ನ ಇಲ್ಲದಿದ್ದರೂ ಬದುಕು ಕಟ್ಟಿಕೊಂಡು ಜೀವನ ನಡೆಸಿದ್ದೇನೆ.. ನನ್ನ ಆದಾಯ ಮತ್ತು ಆಸ್ತಿಯನ್ನು ಕೇಳುತ್ತಾರೆ.. ನಾವ್ಯಾರು ಆಸ್ತಿ ಮಾಡಿಕೊಳ್ಳಬಾರದ?  ಇವರು ಸಾಲೂರಿನಲ್ಲಿ ಯಾರಾದರೂ ಒಳ್ಳೆ ಬಟ್ಟೆ ಹಾಕಿಕೊಂಡು ಹೋದರೆ ಗಂಧ ಕಡಿದಿದ್ದಾನೆ ಎಂದು ಹೇಳುತ್ತಿದ್ದರು..   ಇವರು ಹತ್ತು ವರ್ಷಗಳ ಕಾಲ ರಾಜಕಾರಣ ಮಾಡಿದ್ದಾರೆ.. ತೀರ್ಥಹಳ್ಳಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ?  ಎಂದು ಪ್ರೆಶ್ನೆ ಮಾಡಿದರು..

ಇವರು ಶಿಕ್ಷಣ ಸಚಿವರಾದಾಗ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು.. ಎಷ್ಟು ಜನ ಸತ್ತರು..?  ನನ್ನ ಬಳಿ ಪ್ರತಿಯೊಂದಕ್ಕೂ ದಾಖಲೆ ಇದೆ ತೋರಿಸುತ್ತೇನೆ.. ಶಾಲೆ ಮಕ್ಕಳಿಗೆ ಕೊಟ್ಟಂತಹ ಸೈಕಲ್ ನಲ್ಲಿ ಐಎಸ್ಐ ಮಾರ್ಕ್ ಬೇಡ ಎಂದು ಹೇಳಿದಂತಹ ಶಿಕ್ಷಣ ಮಂತ್ರಿ ಯಾರಾದರೂ ಇದ್ದರೆ ಅದು ಇವರೇ.. ಗಾಂಧಿ ತತ್ವ ಓದಿದ್ದೀರಾ, ಲೋಹಿಯಾ ಬಗ್ಗೆ ,  ಚಿಂತನ ಗಂಗಾ ಬಗ್ಗೆ ಮಾತನಾಡುತ್ತೀರಾ,  ಪುಸ್ತಕ ಓದಿ ಓದಿ ಏನಾಗಿದೆ ನಿಮಗೆ,  ಇವರನ್ನು ನೋಡಿ ಪುಸ್ತಕ ಓದುವುದೇ ಬೇಡ ಎಂದು ಅನಿಸಿದ್ದು ಕೆಲವರಿಗೆ ಇದೆ..  ಕೊಟ್ಟ ಕುದುರೆಯನ್ನು ಏರದವನು  ಶೂರನು ಅಲ್ಲ ಧೀರನು ಅಲ್ಲ ಹಾಗಾಗಿದೆ  ಕಿಮ್ಮನೆ ರತ್ನಾಕರ್ ಅವರ ಪರಿಸ್ಥಿತಿ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು..

ಬಗರ್ ಹುಕುಂ ಸಾಗುವಳಿದಾರರಿಗೆ  10 ಸಾವಿರ ಜನರಿಗೆ ಹಕ್ಕುಪತ್ರ ಕೊಟ್ಟಿದ್ದು ನಾನೇ ಎಂದು ಹೇಳಿದರು.  ಜಿಲ್ಲೆಗೋ ರಾಜ್ಯಕ್ಕೋ ನನಗೆ ಗೊತ್ತಾಗಲಿಲ್ಲ. ಅಷ್ಟು ಜನರಿಗೆ ನಾವು ಹಕ್ಕು ಪತ್ರ ನೀಡಲೇ ಇಲ್ಲ.. ನನ್ನ ಆಸ್ತಿ ಲೆಕ್ಕವನ್ನು ಕಿಮ್ಮನೆಯವರ ಆಪ್ತ ವಿಶ್ವನಾಥ್ ಶೆಟ್ಟಿ ಕೇಳುತ್ತಾರೆ, ಇವರು ಎಂತವರು ಎಂದು ಎಲ್ಲರಿಗೂ ಗೊತ್ತಿದೆ.  ರಾಮೇಶ್ವರ ದೇವಸ್ಥಾನದ ನಾಟ ಕಳವು ಮಾಡಿದವರು.. ಆಗ ತಹಸೀಲ್ದಾರ್ ಅವರೇ ಸ್ವತಃ ಕಂಪ್ಲೇಂಟ್ ಮಾಡಿದ್ದರು.. ವಿಶ್ವನಾಥ್ ಶೆಟ್ಟಿಯವರ ಊರು ಕೊಪ್ಪ ಸಮೀಪದಲ್ಲಿ ಇರುವ ಸೂರ್ಯದೇವಸ್ಥಾನದ ಹತ್ತಿರ ಹೋಗಿ ಪೊಲೀಸರು ನಾಟ ಸೀಜ್ ಮಾಡಿ ತಂದಿದ್ದರು ..ರಾಮೇಶ್ವರ ದೇವಸ್ಥಾನದ ಸಮಿತಿಯಲ್ಲಿ ಇರುವಾಗ ಮತ್ತೊಂದು ಹುಂಡಿ ಇಟ್ಟಿದ್ದರು. ಅದನ್ನ ಸಮಿತಿ ಖರ್ಚಿಗೆ ಎಂದು ವಿಶ್ವನಾಥ್ ಶೆಟ್ಟಿ ಮಾಡಿಕೊಂಡಿದ್ದರು.. ಆ ಹುಂಡಿಯಲ್ಲಿ 65 ಸಾವಿರ ಹಣ ಇತ್ತಂತೆ, ಅದನ್ನ ಬ್ಯಾಂಕಿಗೆ ಕಟ್ಟುತ್ತೇನೆ ಎಂದು ಹೋಗಿದ್ದು ಬಿಟ್ಟರೆ ಇಲ್ಲಿಯವರೆಗೆ ಯಾವ ಬ್ಯಾಂಕ್ ಎಂದು ತಿಳಿಯಲಿಲ್ಲ.. ಅದರಲ್ಲಿ ಎಷ್ಟು ಕಿಕ್ ಬ್ಯಾಕ್ ಯಾರಿಗೆಲ್ಲ ಹೋಯ್ತು..? ಇದನ್ನೆಲ್ಲಾ ಕಿಮ್ಮನೆ ರತ್ನಾಕರ್ ಬಹಿರಂಗಪಡಿಸಬೇಕು ಎಂದರು..

ಕಿಮ್ಮನೆ ರತ್ನಾಕರ್ ಅವರೇ, ನೀವು ನ್ಯಾಯದ ಪರವಾಗಿ, ಪ್ರಾಮಾಣಿಕತೆಯ ಪರವಾಗಿ, ಎಂದೆಲ್ಲಾ ಭಾಷಣ ಬಿಗಿಯುತ್ತೀರಾ,  ರಾಮೇಶ್ವರ ದೇವಸ್ಥಾನದ ಸಮಿತಿಗೆ ವಿಶ್ವನಾಥ ಶೆಟ್ಟಿಯನ್ನ ಹಾಕಿದ್ದು ಸರಿಯೇ? ಅಲ್ಲಿದ್ದ ಬ್ರಾಹ್ಮಣರೇ ಹೇಳುತ್ತಾರೆ ಬೇರೆ ಯಾರು ಇವರಿಗೆ ಸಿಗಲಿಲ್ಲವೇ ?  ಎಂದು,  ನಾನು ಲೆಟರ್ ಮಾಡಿ ಅದನ್ನ ರದ್ದು ಮಾಡಿಸಿದ್ದೆ. ಇಂತಹ ಪುಣ್ಯದ ಕಾರ್ಯವನ್ನು ಕಿಮ್ಮನೆ ರತ್ನಾಕರ ಅವರು ಅವ್ಯಹತವಾಗಿ ಮಾಡಿದ್ದಾರೆ..  ಹಾಗಾಗಿ ವಿಶ್ವನಾಥ ಶೆಟ್ರಿಗೆ ಕಿಮ್ಮನೆ ಗುರುವೇ ಅಥವಾ ಕಿಮ್ಮನೆಯವರಿಗೆ ವಿಶ್ವನಾಥ್ ಶೆಟ್ರು ಗುರುವೇ? ಎಂಬುದೇ ಈಗ ಯಕ್ಷಪ್ರಶ್ನೆಯಾಗಿದೆ. ಅತ್ಯಂತ, ಬಾರಿ ಬುದ್ಧಿವಂತಿಕೆ ತಾಲೂಕಿನಲ್ಲಿ ಇವರಿಬ್ಬರಿಗೆ ಇರುವುದು, ಉಳಿದವರೆಲ್ಲರೂ ದಡ್ಡರು,  ನಾವೆಲ್ಲ ಪುಸ್ತಕ ಓದದವರು ನಮಗೆ ಗಾಂಧಿ, ಅಂಬೇಡ್ಕರ್ ಯಾರು ಗೊತ್ತಿಲ್ಲ,  ಇವರು ಬಹಳ ಓದಿಕೊಂಡು ಗಾಂಧಿ ಜಯಂತಿ ಆಚರಿಸುವವರು, ಉಪವಾಸ ಮಾಡುವವರು, ಕಿಮ್ಮನೆಯವರು ಒಂದು ಮುಖವಾಡವನ್ನು ಹಾಕಿಕೊಳ್ಳಲು ಹೊರಟಿದ್ದಾರೆ.. ಆ ಮುಖವಾಡದಲ್ಲಿ ಏನಿದೆ ಎಂಬುದನ್ನು ಜನರ ಮುಂದೆ ಬಿಚ್ಚಿಡಬೇಕಲ್ವಾ ಆ ಕೆಲಸ ಮಾಡುತ್ತಿದ್ದೇನೆ ಎಂದರು...

ಕಿಮ್ಮನೆ ರತ್ನಾಕರವರು ಪ್ರತಿಭಟನೆಯಲ್ಲಿ ಅಭಿನಂದನ್ ಹೆಸರನ್ನು ಸೇರಿಸಲು ನಾನು ಹೇಳಿಲ್ಲ ಎಂದು ಹೇಳುತ್ತಾರೆ.. ಇವರು ನಮ್ಮನ್ನು ಮುಗಿಸಲು ಸುಪಾರಿ ಕೊಡಲು ಕೂಡ ರೆಡಿ ಇದ್ದಾರೆ.. ಚುನಾವಣೆಯಲ್ಲಿ ಇವರ ಎದುರಾಳಿ ಎಂದರೆ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ.. ಸಂಬಂಧ ಇಲ್ಲದ ನನ್ನ ಮಗನ ಹೆಸರನ್ನು ಸೇರಿಸಿ ಎಲ್ಲಾ ಮಾಧ್ಯಮಗಳಲ್ಲೂ ಬರುವ ಹಾಗೆ ಮಾಡಿ, ಅಲ್ಲಿ ಬಂದು ಓಡಾಡಿದ್ದಾನೆ ಎಂದಲ್ಲ ಹೇಳಿ ದೂರು ದಾಖಲಿಸಿದ್ದಾರೆ.. ಹಾಗಾಗಿ ಈ ವಿಚಾರವಾಗಿ ನಾನು ಕೋರ್ಟಿಗೆ ಹೋಗುತ್ತೇನೆ. ಯಾರ ಮಕ್ಕಳನ್ನ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ..  ಇತ್ತೀಚಿಗೆ ಅವರಿಗೂ ಕಷ್ಟವಾಗಿದೆ ಹುಟ್ಟಿದ ಮಗ ಅವರ ಜೊತೆಗಿಲ್ಲ.. ಇವರು ಕಷ್ಟದಲ್ಲಿದ್ದಾಗಲೂ ಅವರು ಬರಲ್ಲ, ಇವರ ಬುದ್ಧಿ ಹಿಡಿಸಲ್ವಾ? ಅಥವಾ ಏನೋ ಗೊತ್ತಿಲ್ಲ .. ದೂರ ಆದ ಬಗ್ಗೆ ನಾನು ಕಮೆಂಟ್ ಮಾಡಲ್ಲ.. ನನ್ನ ಮಗ ಸೊಸೆ 10 ಗಂಟೆಗಳ ಕಾಲ ದುಡಿದು ತಿನ್ನುತ್ತಾರೆ ಎಂದು ಹೇಳುತ್ತಾರೆ,  ಹಾಗಾದರೆ ಬೇರೆಯವರ ಮಕ್ಕಳೆಲ್ಲ ಕದ್ದು ತಿನ್ನುತ್ತಾರಾ ಎಂದು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು..

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ನವೀನ್ ಹೆದ್ದೂರು, ನಾಗರಾಜ್ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ರಕ್ಷಿತ್ ಮೇಗರವಳ್ಳಿ ಸೇರಿ ಹಲವರು ಉಪಸ್ಥಿತರಿದ್ದರು..





Previous Post Next Post