ಹೊನ್ನೇತಾಳು ಸರ್ಕಾರಿ ಶಾಲೆಯಲ್ಲಿ 80ನೇ ವರ್ಷದ ಅದ್ದೂರಿ ಸ್ವಾತಂತ್ರ್ಯೋತ್ಸವ Honnetalu

ಹೊನ್ನೇತಾಳು ಸರ್ಕಾರಿ ಶಾಲೆಯಲ್ಲಿ 80ನೇ ವರ್ಷದ ಅದ್ದೂರಿ ಸ್ವಾತಂತ್ರ್ಯೋತ್ಸವ 

ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ಯಾಗ್...ಸಮವಸ್ತ್ರ ವಿತರಣೆ 

ತೀರ್ಥಹಳ್ಳಿ : ಶಿಕ್ಷಣ ಸಚಿವರೇ ಮೆಚ್ಚಿದ ಆಗುಂಬೆ ಹೋಬಳಿಯ ಹೊನ್ನೇತಾಳು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  80ನೇ ವರ್ಷದ ಸ್ವಾತಂತ್ರ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಯಿತು.. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿತ್ಯಾನಂದ ಅವರು ಧ್ವಜಾರೋಹಣ ನೆರವೇರಿಸಿದರು..

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ವಿಶ್ವನಾಥ್ ಗದ್ದೆಮನೆಯವರು 
ಶಾಲೆಯ 135 ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರ, ಒಂದು ಜೊತೆ ಬ್ಯಾಗ್ ಹಾಗೂ ಒಂದು ಜೊತೆ ಟ್ರ್ಯಾಕ್  ಸೂಟ್ ವಿತರಿಸಿದರು.

ವಿತರಣಾ ಕಾರ್ಯಕ್ರಮದ ನಂತರ ಮಾತನಾಡಿದ ಅವರು ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು ನಮಗೆ ಸಿಗದೇ ಇರುವ ಸೌಲಭ್ಯಗಳು ಇವತ್ತಿನ ಮಕ್ಕಳಿಗೆ ಸಿಗಬೇಕು.. ಆ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಸತತವಾಗಿ 3 ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಟ್ರ್ಯಾಕ್ ಸೂಟ್ ವಿತರಿಸುತ್ತಿದ್ದೇವೆ. ಓದು, ಕ್ರೀಡೆ, ಮನರಂಜನೆಯಲ್ಲಿ ರಾಷ್ಟ್ರಮಟ್ಟದವರೆಗೂ ಮಲೆನಾಡಿನ ಸರ್ಕಾರಿ ಶಾಲೆ ಮಕ್ಕಳು ಮುನ್ನುಗುತ್ತಿರುವುದು ನೋಡಿದರೆ ಬಹಳ ಸಂತೋಷ ಆಗುತ್ತದೆ.. ಶೈಕ್ಷಣಿಕ ಹಾಗೂ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿ ಉತ್ತುಂಗ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಇತ್ತೀಚಿನ ದಿನಗಳಲ್ಲಿ  ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾಗುತ್ತಿರುವುದು ಬಹಳ ಆತಂಕಕಾರಿ ವಿಚಾರವಾಗಿದೆ.. ಪೋಷಕರು, ಶಾಲಾ ಶಿಕ್ಷಕರು ಈ ಕುರಿತು ಮಕ್ಕಳ ಮೇಲೆ ನಿಗಾವಹಿಸಬೇಕು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕೃತಿ ಕಲಿಸಿದರೆ ಮುಂದೆ ಊರಿಗೆ, ದೇಶಕ್ಕೆ ಇವರುಗಳೇ ಆಸ್ತಿಯಾಗುತ್ತಾರೆ.. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತು ಆಗ ಪೂರ್ಣವಾಗುತ್ತದೆ.  ಇಲ್ಲವಾದರೆ ಆ ವಾಕ್ಯಕ್ಕೆ ಅರ್ಥ ಇರುವುದಿಲ್ಲ.. ಹೊನ್ನೇತಾಳು ಶಾಲೆಯ ಬಗ್ಗೆ ಈಗಾಗಲೇ ಪತ್ರಿಕೆ, ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಷ್ಟೇ ಅಲ್ಲದೆ ಶಿಕ್ಷಣ ಸಚಿವರೇಈ ಶಾಲೆಯ ಬಗ್ಗೆ ಮಾತನಾಡಿದ್ದಾರೆ ಎಂದರೆ ಈ ಶಾಲೆಯ ಬಗ್ಗೆ ಮಾತನಾಡುವುದು ಏನಿಲ್ಲ.. ಅತ್ಯುತ್ತಮ ಶಿಕ್ಷಕರಿದ್ದರೆ, ಆಡಳಿತ ಮಂಡಳಿಯ ಸಹಕಾರ ಇದ್ದರೆ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಇರುವುದಿಲ್ಲ ಎಂದರು..

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸದಸ್ಯರು ಹಾಜರಿದ್ದರು.
Previous Post Next Post