ಶಿಕ್ಷಣದ ವಿಚಾರದಲ್ಲಿ ಇಡೀ ರಾಜ್ಯವೇ ತೀರ್ಥಹಳ್ಳಿ ಕಡೆ ತಿರುಗಿ ನೋಡುವಂತೆ ಆಗಿದೆ - ಆರಗ ಜ್ಞಾನೇಂದ್ರ Araga Jnanendra

ಶಿಕ್ಷಣದ ವಿಚಾರದಲ್ಲಿ ಇಡೀ ರಾಜ್ಯವೇ ತೀರ್ಥಹಳ್ಳಿ ಕಡೆ ತಿರುಗಿ ನೋಡುವಂತೆ ಆಗಿದೆ - ಆರಗ ಜ್ಞಾನೇಂದ್ರ 


ತೀರ್ಥಹಳ್ಳಿ :  ಯಾವುದೋ ಕಟ್ಟಡ, ಸೇತುವೆ ಕಟ್ಟಿದಾಗ ಜನರ ಕಣ್ಣಿಗೆ ಕಾಣಿಸುತ್ತದೆ. ಅವರು ಹೇಳಿದಾಗ ಸಂತೋಷ ಆಗುತ್ತದೆ.  ನಾನು ಅತೀ ಕಷ್ಟದಿಂದ ಬಂದಿದ್ದು ಈಗಿನ ವಿದ್ಯಾರ್ಥಿಗಳಿಗೆ ಆ ರೀತಿ ಆಗಬಾರದು ಎಂದು ಹಲವು ಕಾಲೇಜು ತಂದಿದ್ದೇನೆ.. ಕೆಲವು ಶಾಲೆಯನ್ನು ನಾನೇ ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದ್ದೇನೆ. ಇಷ್ಟೆಲ್ಲ ಮಾಡಿದ ನಂತರ ನಮ್ಮ ಶಾಲೆಗಳು ಜಿಲ್ಲೆಗೆ, ರಾಜ್ಯಕ್ಕೆ ಮೊದಲ ಸ್ಥಾನ ಎಂದು ತಿಳಿದಾಗ ಆಗುವ ಸಂತೋಷವೇ ಬೇರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..

ಜುಲೈ 18 ರ ಶನಿವಾರ ಪಟ್ಟಣದ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ 2025-26 ರ ಎಸ್ಎಸ್ಎಲ್'ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ತೀರ್ಥಹಳ್ಳಿ ಕ್ಷೇತ್ರವನ್ನು ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.. 

ಕಳೆದ ಮೂರ್ನಾಲ್ಕು ವರ್ಷದಿಂದ ತೀರ್ಥಹಳ್ಳಿ ಶಾಲಾ ಕಾಲೇಜುಗಳು 100% ರಿಸಲ್ಟ್ ಪಡೆಯುತ್ತಿವೆ.. ಜಿದ್ದಿಗೆ ಬಿದ್ದವರಂತೆ ಶಾಲೆಯ ಶಿಕ್ಷಕರು ಪ್ರಯತ್ನ ಪಟ್ಟು ಕೆಲಸ ಮಾಡುತ್ತಿದ್ದಾರೆ.  ಯು ಆರ್ ಅನಂತಮೂರ್ತಿ ಶಾಲೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಶಾಲೆ.. ಈಗ ಅದು ಸಹ ಒಳ್ಳೆಯ ರಿಸೆಲ್ಟ್ ಪಡೆದಿವೆ.. ಈಗ ಇಡೀ ರಾಜ್ಯವೇ ತೀರ್ಥಹಳ್ಳಿ ಕಡೆ ತಿರುಗಿ ನೋಡುವಂತೆ ಆಗಿದೆ.. ಶಿಕ್ಷಕರನ್ನು ರಾಜಕಾರಣಿಗಳು ಮಾತನಾಡಿಸುವುದು ಕಡಿಮೆ. ಆದರೆ ನಾನು ವರ್ಷಕ್ಕೆ ಮೂರ್ನಾಲ್ಕು ಬಾರಿ ಚರ್ಚೆ ನಡೆಸುತ್ತೇನೆ.. ಬೆಂಗಳೂರಿನಲ್ಲೂ ಬಾರದ ರಿಸೆಲ್ಟ್ ತೀರ್ಥಹಳ್ಳಿಯಲ್ಲಿ ಬರುತ್ತಿದೆ. ಅದಕ್ಕಿಂತ ಸಂತೋಷ ಏನಿದೆ ಎಂದರು..

ಮೂರು ತಾಲೂಕಿಗೆ ನಾನು ಶಾಸಕ.. ಶಿವಮೊಗ್ಗದ ಒಂದು ಹೋಬಳಿ, ಹೊಸನಗರದ ಎರಡು ಹೋಬಳಿ ಹಾಗೂ ತೀರ್ಥಹಳ್ಳಿಗೆ ನಾನು ಶಾಸಕ. ಕೆಲವೊಮ್ಮೆ ಪಕ್ಷದ ಚೌಕಟ್ಟು ಮೀರಿ ಕೆಲಸ ಮಾಡಬೇಕು.  ಎಲ್ಲವನ್ನು ರಾಜಕಾರಣ ಮಾಡುವುದಾದರೆ ಅದು ಸರಿಯಲ್ಲ.. ಇಂದು ಎಲ್ಲಾ ಪಕ್ಷದವರನ್ನು ಕರೆದು ಶಿಕ್ಷಕರ ಜೊತೆಗೆ ಮಾತನಾಡಿ ಅವರ ಕೆಲಸವನ್ನು ಬೆಂಬಲಿಸೋಣ ಎಂದು ಈ ಕಾರ್ಯಕ್ರಮ ಮಾಡಿದ್ದೇವೆ..  ನಮ್ಮ ಮಕ್ಕಳಲ್ಲೂ ಚಾಲೆಂಜ್ ಮಾಡಿ ಓದುವ ಗುಣ ಇದೆ ಹಾಗಾಗಿ ಈ ಬಾರಿಗಿಂತ ಮುಂದಿನ ಬಾರಿ ಹೆಚ್ಚು ಅಂಕ ಪಡೆಯುವುದರ ಜೊತೆಗೆ ರಾಜ್ಯದಲ್ಲಿ ಹೆಸರು ಮಾಡುವಂತಾಗಲಿ ಎಂದರು..

ಸನ್ಮಾನಿತರಾದ ಸುಧಾಕರ್ ಶೆಟ್ಟಿ ಮಾತನಾಡಿ ಶಾಸಕರು, ಮಾಜಿ ಗೃಹಸಚಿವರು ತಮ್ಮ ಕೆಲಸವನ್ನು ಬಿಟ್ಟು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನೋಡಿದರೆ ಸಂತೋಷವಾಗುತ್ತದೆ. ಅದರಲ್ಲೂ ಅವರದ್ದು ಸ್ವಾರ್ಥ ಸಹ ಇದೆ. ಕಾರಣ ಮುಂದಿನ ಬಾರಿಯ ಫಲಿತಾಂಶದಲ್ಲಿ ಇದಕ್ಕಿಂತ ಹೆಚ್ಚಿನ ಅಂಕ ಬರಬೇಕು ಎಂಬುದು ಹೌದು.. ನಾವು ಓದುವಾಗ ಟೀಚರ್ ಸರಿ ಇಲ್ಲ ಎನ್ನುವುದು ಅದೇ ನಾವು ಓದಿ ಶಿಕ್ಷಕರಾದಾಗ ಹೇಳುವುದು ಮಕ್ಕಳು ಸರಿ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.. ನನಗೆ ಒಂದು ಸಂಸ್ಥೆಯ ಮುಖ್ಯಸ್ಥ ಎಂದು ಹೇಳುವುದಕ್ಕಿಂತ ಶಿಕ್ಷಕ ಎಂದು ಹೇಳಿದಾಗ ಬಹಳ ಸಂತೋಷ ಆಗುತ್ತದೆ.. ಒಬ್ಬರ ಹಾಗೆ ಮತ್ತೊಬ್ಬರು ಇರಲು ಸಾಧ್ಯವೇ ಇಲ್ಲ. ಅವಳಿ ಜವಳಿ ಮಕ್ಕಳಾದರೂ ಸಹ ಅವರ ಗುಣದಲ್ಲಿ ಬದಲಾವಣೆ ಇರುತ್ತದೆ.. ಮನುಷ್ಯನಿಗೆ ಹಣ ಆಸ್ತಿಗಿಂತ ಶಿಕ್ಷಕರಿಗೆ ಯಾರಾದರೂ ಬಂದು ಕಾಲಿಗೆ ಬಿದ್ದು ನಾನು ಇಂತಹ ಕೆಲಸದಲ್ಲಿ ಇದ್ದೇವೆ ಎಂದಾಗ  ಆಗುವ ಖುಷಿಯೇ ಬೇರೆ ಎಂದರು.. 

ಈಗಿನ ಶಿಕ್ಷಕರಿಗೆ ಗೌರವ ಇಲ್ಲ ಎಂದು ಹೇಳುತ್ತಾರೆ ಅದು ಸುಳ್ಳು.. ಶಿಕ್ಷಕರು ಸರಿ ಇದ್ದರೆ ಅವರಿಗೆ ಖಂಡಿತ ಗೌರವ ಸಿಗುತ್ತದೆ.. ಮಕ್ಕಳು ಏನೇ ಹೇಳಬಹುದು ಆದರೆ ತಮ್ಮ ಶಾಲೆಯ ಶಿಕ್ಷಕರಿಗೆ ಏನಾದರು ಪ್ರಶಸ್ತಿ ಬಂದರೆ ಅದಕ್ಕಿಂತ ಖುಷಿ ಮಾಡುವ ವಿದ್ಯಾರ್ಥಿಗಳು ಇಲ್ಲ.. ಪರೀಕ್ಷೆಯ ಪೇಪರ್ ಕೊಡುವಾಗ ಭೇದ ಭಾವ ಮಾಡಬೇಡಿ.. ಹಾಗೇನಾದರೂ ಇದ್ದರೆ ನಿಮ್ಮ ಕೊಠಡಿಗೆ ಕರೆದು ಬುದ್ದಿವಾದ ಹೇಳಿ.. ಯಾವುದೇ ಕಾರಣಕ್ಕೂ ಸಂಬಳಕ್ಕೆ ಕೆಲಸ ಮಾಡಬೇಡಿ.. ನಾವು ತೆಗೆದುಕೊಳ್ಳುವ ಹಣಕ್ಕೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು .. ಈಗ ಸರ್ಕಾರ ಸಹ ಒಳ್ಳೆಯ ರೀತಿಯ ಸಂಬಳ ಕೊಡುತ್ತದೆ ಹಾಗಾಗಿ ತಮ್ಮ ಕೆಲಸದ ಮೇಲೆ ನಿಷ್ಠೆ ಇರಲಿ ಎಂದರು..

ಸಾಧಾರಣ ವಿದ್ಯಾರ್ಥಿಗಳು ಯಾವತ್ತು ಶಿಕ್ಷಕರನ್ನು ಪ್ರೀತಿ ಮಾಡುತ್ತಾರೆ.. ಅವರು ಶಿಕ್ಷಕರಿಗೆ ಏನೇ ಹೇಳಬಹುದು ಆದರೆ ನಾವು ಅಂತವರನ್ನು ಸರಿಯಾದ ಮಾರ್ಗದರ್ಶನ ನೀಡಿ ಸರಿಪಡಿಸಬೇಕು.. ತುಂಬಾ ಓದಿದವರು ದೇಶದಿಂದ ಹೊರ ಹೋಗಿ ಜೀವನ ಮಾಡುತ್ತಾರೆ. ಆದರೆ ಕಡಿಮೆ ಅಂಕ ಪಡೆದವರೇ ಇಲ್ಲಿ ಇದ್ದು ದೇಶ ಉಳಿಸುವವರು.. ಏನೇನೋ ಮಾತನಾಡುತ್ತಾರೆ ಎಂದು ತಿಳಿದುಕೊಳ್ಳಬೇಡಿ. ನನಗೆ ಈಗ 60 ವರ್ಷ ಆಯಿತು. ಒಂದು ಮಾತಿದೆ ಅರವತ್ತು ಆದ ಮೇಲೆ ಅರಳು ಮರಳು ಅಂತ ಆದರೆ ಅದು ಮರಳಿ ಅರಳುವುದು ಎಂದರು.. ಹಾಗೆಯೇ ನನಗೆ ನಮ್ಮ ತಂದೆಯೇ ಸ್ಫೂರ್ತಿ ಹಾಗಾಗಿ ಮುಂದೆಯೂ ಕೂಡ ನಾನು ಶಿಕ್ಷಕನಾಗಬೇಕು ಹಾಗೆಯೇ ನಿಮ್ಮ ಊರಿನ ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಹಾಗಾಗಿ ಒಳ್ಳೆಯ ರೀತಿಯಲ್ಲಿ ಕೆಲಸ ನಿರ್ವಹಿಸಿ ಮುಂದೆಯೂ ಕೂಡ ಒಳ್ಳೆಯ ರಿಸಲ್ಟ್ ಬರಲಿ ಎಂದು ಹಾರೈಸಿದರು.....

ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ದೇಶದ ಪ್ರಜೆಗಳನ್ನು ನಿರ್ಮಾಣ ಮಾಡುವಂತ ಶಿಕ್ಷಕರಿಗೆ ಅಭಿನಂದನೆ ಮಾಡುವ ವಿಶೇಷ ಕಾರ್ಯಕ್ರಮ ಇದಾಗಿದೆ.. ಶಿಕ್ಷಕರಿಗೆ ಬಹಳ ದೊಡ್ಡ ಗೌರವ ಕೊಡುವ ದೇಶ ಎಂದರೆ ಅದು ರಷ್ಯಾ.. ನಮ್ಮದು ವೈವಿಧ್ಯಮಯ ದೇಶ.. ಮಕ್ಕಳನ್ನು ಆಸ್ತಿ ಮಾಡಬೇಕು ಎಂದು ತಮ್ಮ ಎಲ್ಲಾ ಕೆಲಸ ಕಾರ್ಯ ಬಿಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ಅದರ ಜೊತೆಗೆ ಪೋಷಕರು ಕೂಡ ಮಕ್ಕಳ ವಿಚಾರದಲ್ಲಿ ಸರಿಯಾದ ರೀತಿ ನೋಡಿಕೊಳ್ಳಬೇಕು.. ಈಗಿನ ಮಕ್ಕಳು 625 ಕ್ಕೆ 625 ತೆಗೆಯುವುದು ನೋಡಿದರೆ ನಮಗೆ ಬಹಳ ಖುಷಿಯಾಗುತ್ತದೆ..ಈಗ ಅಂಕದ ವಿಚಾರದಲ್ಲಿ ಸ್ಪರ್ಧೆ ಕೂಡ ನಡೆಯುತ್ತಿದೆ. ಅದು ಒಂದು ಲೆಕ್ಕದಲ್ಲಿ ಒಳ್ಳೆಯದು ಎಂದರು.

90% ಮೇಲೆ ಇರುವ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಸೀಟ್ ಕೊಡುವುದಾದರೆ ಅದು ತಪ್ಪಾಗುತ್ತದೆ.. ನಿಮ್ಮ ಮೌಲ್ಯ ಏನು? ಈಗ ತುಂಬಾ ಕಡಿಮೆ ಅಂಕ ಯಾರು ಪಡೆಯುವುದಿಲ್ಲ. 75 % ಬಂದವರಿಗೆ ಆದರೂ ನಿಮ್ಮ ಶಾಲೆಗಳಲ್ಲಿ ಸೀಟ್ ಕೊಡುವಂತಾಗಲಿ.. 95% ಇರುವವರಿಗೆ ಸೀಟ್ ಕೊಟ್ಟು ಶಿಕ್ಷಣ ನಡೆಸುವುದು ಸರಿಯಲ್ಲ. ಇನ್ನು ಮಕ್ಕಳು ಕೆಲವೊಂದು ದುರಭ್ಯಾಸಕ್ಕೆ ಒಳಗಾಗುತ್ತಿದ್ದಾರೆ. ಅದನ್ನು ತಪ್ಪಿಸಬೇಕು.. ಇತ್ತೀಚಿಗೆ ಸರ್ಕಾರಿ ಶಾಲೆ ಕೂಡ ಬಹಳ ಒಳ್ಳೆಯ ಕೆಲಸ ಮಾಡುತ್ತಿವೆ. ಮುಂದೆಯೂ ಒಳ್ಳೆಯ ರಿಸಲ್ಟ್ ಬರಲಿ ಎಂದರು..

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಂಜಿತ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಅಕ್ಷರದಾಸೋಹ ಅಧಿಕಾರಿ ಪ್ರವೀಣ್ , ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಗ್ಯಾರೆಂಟಿ ಯೋಜನೆಯ ತಾಲೂಕು ಅಧ್ಯಕ್ಷರು ಶಚಿಂದ್ರ ಹೆಗಡೆ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್ ಸೇರಿ ಹಲವರು ಉಪಸ್ಥಿತರಿದ್ದರು...



Previous Post Next Post