ತೀರ್ಥಹಳ್ಳಿಯಲ್ಲಿ ನಡೆದ ಶಾರದಾರಾಧನಂ ಎಂಬ ವಿಶಿಷ್ಟ ಕಾರ್ಯಕ್ರಮ Tth

ತೀರ್ಥಹಳ್ಳಿಯಲ್ಲಿ ನಡೆದ ಶಾರದಾರಾಧನಂ ಎಂಬ ವಿಶಿಷ್ಟ ಕಾರ್ಯಕ್ರಮ 

ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿದ ಶೃಂಗೇರಿ ಶ್ರೀಗಳು 

ತೀರ್ಥಹಳ್ಳಿ : ಅಧಿಕ ಜ್ಯೇಷ್ಠದ ಮಾಸದ ಅಂಗವಾಗಿ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನ ಹಾಗೂ ಮಾಧವ ದೇವಸ್ಥಾನದ ಸಹಯೋಗದೊಂದಿಗೆ ಹರಿಹರೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದ ಒಂದು ಭಾಗವಾಗಿ ಶಾರದರಾಧನಂ ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಶೃಂಗೇರಿಯ  ಶ್ರೀಗಳ ಸಾನಿಧ್ಯದೊಂದಿಗೆ ನೆರವೇರಿಸಲಾಯಿತು..


ಶನಿವಾರ ಸಂಜೆ 05- 45 ಕ್ಕೆ  ಶ್ರೀ ಜಗದ್ಗುರುಗಳು ಆಗಮಿಸಿ ಗಾಂಧಿ ಚೌಕದಲ್ಲಿ ಇರುವಂತ ಶ್ರೀ ಕಲ್ಲಾರೆ ಗಣಪತಿ ದೇವರ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ನಂತರ,ಪೂರ್ಣಕುಂಭ ಸ್ವಾಗತದೊಂದಿಗೆ ವಿದ್ಯಾಧಿರಾಜಸಭಾಭವನಕ್ಕೆ ಆಗಮಿಸಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಜಗದ್ಗುರುಗಳ ಕರಕಮಲಗಳಿಂದ ಅನುಗ್ರಹಪೂರ್ವಕ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಲಾಯಿತು. ಸರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಈ ಕಾರ್ಯಕ್ರಮ ಅತ್ಯಂತ ವೈಶಿಷ್ಟ್ಯವಾಗಿ ಕಾಣಿಸಿತು..

ರಾಮೇಶ್ವರ ದೇವಸ್ಥಾನದ ಪ್ರಧಾನ ತಂತ್ರಗಳಾದ  ವೇ|ಬ್ರ|ಶ್ರೀ ಲಕ್ಷ್ಮೀಶ್ ತಂತ್ರಿಗಳ ನೇತೃತ್ವದಲ್ಲಿ ನಡೆದಂತಹ ಈ ಒಂದು ಕಾರ್ಯಕ್ರಮ ಜನ ಮನ್ನಣೆಯನ್ನು ಪಡೆಯಿತು.. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತಹ ವಿದ್ಯಾರ್ಥಿಗಳಿಗೆ ಹಾಗೂ ಆಗಮಿಸಿದ್ದ ಭಕ್ತಾದಿಗಳನ್ನು ಕುರಿತು ಶೃಂಗೇರಿ ಶಾರದಾ ಪೀಠದ  ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಆಶೀರ್ವಚನ ನೀಡಿದರು.  ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಇಂತಹ ಒಂದು ಕಾರ್ಯಕ್ರಮ ನಡೆದಿದ್ದು ಶೃಂಗೇರಿ ಗುರುಗಳಿಂದ  ಆಶೀರ್ವಾದದ ಜೊತೆಗೆ ಪುಸ್ತಕವನ್ನು ಪಡೆದ ವಿದ್ಯಾರ್ಥಿಗಳು  ಸಂಭ್ರಮ ಪಟ್ಟರು ...
Previous Post Next Post