ಸಹ್ಯಾದ್ರಿ ಸಂಸ್ಥೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸ್ಥಾನಮಾನ ಇದೆ - ಗುರುರಾಜ್ Sahyadri

ಸಹ್ಯಾದ್ರಿ ಸಂಸ್ಥೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸ್ಥಾನಮಾನ ಇದೆ - ಗುರುರಾಜ್ 

ತೀರ್ಥಹಳ್ಳಿ : ಪ್ರೌಢಶಿಕ್ಷಣ ಮುಗಿಸಿ ಎಲ್ಲರು ಪದವಿ ಶಿಕ್ಷಣಕ್ಕೆ ಕಾಲಿಟ್ಟಿದ್ದೀರಾ, 2026-27 ಹಾಗೂ 2027-28 ರ ಎರಡು ವರ್ಷಗಳ ಕಾಲ ಅತ್ಯಂತ ಮಹತ್ತರ ಪಡೆದಿರುತ್ತದೆ. ಬೇರೆ ಬೇರೆ ಕಡೆ ಪ್ರೌಢ ಶಿಕ್ಷಣ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಸಹ್ಯಾದ್ರಿ ಸಂಸ್ಥೆಗೆ ಬಂದಿದ್ದೀರಾ. ಎಲ್ಲಾ ವಿದ್ಯಾರ್ಥಿಗಳಿಗೆ ಈ ಎರಡು ವರ್ಷಗಳು ಶುಭಕರವಾಗಿರಲಿ ಎಂದು ಪ್ರಾಂಶುಪಾಲರಾದ ಗುರುರಾಜ್ ತಿಳಿಸಿದರು.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು. ಇತ್ತೀಚಿಗೆ ನಮ್ಮ ಸಂಸ್ಥೆಯಲ್ಲಿ ಅತ್ಯುನ್ನತ ಶ್ರೇಣಿ, ಪ್ರಥಮ ಶ್ರೇಣಿಯಂತೆ ಶೇ 100 % ರಷ್ಟು ಅಂಕಗಳನ್ನು ಪಡೆದಿರುತ್ತದೆ. ಈಗಾಗಲೇ ಪ್ರೌಢ ಶಿಕ್ಷಣ ಮುಗಿಸಿ ಬಂದವರಿಗೆ ಶೇ 90% ರಷ್ಟು ಪಡೆದಿದ್ದರು ಅವರನ್ನು ಶೇ 100% ರಷ್ಟು ಅಂಕ ಪಡೆಯುವಂತೆ ಮಾಡುವ ಕೆಲಸ ನಮ್ಮ ಶಿಕ್ಷಕರದ್ದು, ನಮ್ಮ ಸಂಸ್ಥೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸ್ಥಾನಮಾನ ಇದೆ. ಕಾಲೇಜು ಸಮಯದಲ್ಲಿ ಯಾವುದೇ ಕಾರಣಕ್ಕೂ ಹೊರಗಡೆ ಬಿಡುವುದಿಲ್ಲ. ರಜೆ ಸಂದರ್ಭದಲ್ಲಿ ನಾವೇ ತಿಳಿಸುತ್ತೇವೆ. ಮಕ್ಕಳ ಬಗ್ಗೆ ಪೋಷಕರು ಸಹ ಗಮನವಹಿಸಬೇಕು ಎಂದರು..

ಮೊಬೈಲ್ ಗಳನ್ನು ಯಾವುದೇ ಕಾರಣಕ್ಕೂ ಕಾಲೇಜಿಗೆ ತರುವಂತಿಲ್ಲ. ಮೊಬೈಲ್ ನಲ್ಲಿ ರಜೆ ಹಾಗೂ ಪೋಷಕರ ಸಭೆ ಹೊರತು ನೋಟ್ಸ್, ವಿಡಿಯೋ, ಪಾಠ ಯಾವುದನ್ನೂ ಕಳುಹಿಸುವುದಿಲ್ಲ. ಕಾಲೇಜು ಕ್ಯಾಂಪಸ್ ಒಳಗೆ ಮೊಬೈಲ್ ಬಳಕೆ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಕಡಿಮೆ ಮಾಡಿಸಿ. ಈಗಿನ ಸಾಮಾಜಿಕ ಜಾಲತಾಣದಿಂದ ಮಕ್ಕಳಿಗೆ ತೊಂದರೆ ಆಗುತ್ತಿರುವುದನ್ನು ಎಲ್ಲರು ನೋಡಿದ್ದೀರಾ, ಹಾಗಾಗಿ ಮನೆಯಲ್ಲಿ ಸಹ ಮೊಬೈಲ್ ಬಳಕೆ ಕಡಿಮೆ ಮಾಡಿಸಿ ಎಂದು ಪೋಷಕರಿಗೆ ತಿಳಿಸಿದರು..

ನಮ್ಮಲ್ಲಿ 10 ರಿಂದ 15 ವರ್ಷ ಅನುಭವ ಇರುವ ಶಿಕ್ಷಕರು ಇದ್ದಾರೆ. ನಮ್ಮಲ್ಲಿ ಬರಿ ಪಠ್ಯ ಮಾತ್ರ ಅಲ್ಲದೆ ಪಠ್ಯೇತರ ಚಟುವಟಿಕೆಯಲ್ಲೂ ಹೆಸರು ಮಾಡುತ್ತಿದ್ದೇವೆ. ಮಕ್ಕಳಿಗೆ ಎರಡು ಬೇಕು ಹಾಗಾಗಿ ನಮ್ಮ ಸಂಸ್ಥೆಯಲ್ಲಿ ಸಮಾನ ಅವಕಾಶ ನೀಡಿದ್ದೇವೆ.. ಇಲ್ಲಿ ಅಂಕಗಳಿಕೆ ಎಷ್ಟು ಮುಖ್ಯವೋ ಮಕ್ಕಳಿಗೆ ಸಂಸ್ಕಾರ ಕೂಡ ಅಷ್ಟೇ ಮುಖ್ಯ. ನಾವು ಶಿಸ್ತು ಹಾಗೂ ಸಂಸ್ಕಾರ ಕಲಿಸುತ್ತೇವೆ. ನಮ್ಮಲ್ಲಿ ಒಂದು ಕ್ರೀಡೆಯಲ್ಲಿ ಅಥವಾ ಅಂಕದ ವಿಷಯದಲ್ಲಿ ಮಾತ್ರ ಹೆಸರು ಬರುವಂತೆ ನೋಡಿಕೊಳ್ಳುತ್ತೇವೆ. ಇನ್ಯಾವುದಕ್ಕೂ ಇಲ್ಲಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು..
Previous Post Next Post