ತೀರ್ಥಹಳ್ಳಿಯಲ್ಲಿ ಗಾಂಜಾ ಹಾವಳಿ - ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ..!?
ಪುಡಿ ರೌಡಿಗಳಿಗೆ ಬೆಂಬಲ ನೀಡುವ ಪುಡಾರಿ ರಾಜಕಾರಣಿಗಳು ..!?
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು ಇಂತವರಿಗೆ ಮರಿ ಪುಡಾರಿ ರಾಜಕೀಯದ ನಾಯಕರ ಬೆಂಬಲ ಇರುವುದು ತಿಳಿದು ಬಂದಿದೆ.. ಮರಳು ಮಾಫಿಯಕ್ಕೂ ಈ ಪುಡಿ ರೌಡಿಗಳಿಗೂ ನಂಟು ಇದ್ದು ರಾತ್ರಿ ಮರಳು ಹೊಡೆಯುವುದು, ಬಾಕಿ ಸಂದರ್ಭದಲ್ಲಿ ತಮ್ಮ ಇಷ್ಟ ಬಂದಂತೆ ವರ್ತಿಸುವುದು ಮಾಡುತ್ತಿದ್ದರು ಪೊಲೀಸ್ ಇಲಾಖೆ ಮೌನವಾದಂತೆ ಕಾಣಿಸುತ್ತಿದೆ..
ತೀರ್ಥಹಳ್ಳಿಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು ಗಾಂಜಾ ನಶೆಯಲ್ಲಿ ಈ ಪುಡಿ ರೌಡಿಗಳು ತಮ್ಮ ಅಟ್ಟಹಾಸ ಮೆರೆಯುತ್ತಿದ್ದರು ಪೊಲೀಸ್ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವಂತೆ ಕಾಣಿಸುತ್ತಿದೆ.. ಪೊಲೀಸ್ ಅಧಿಕಾರಿಗಳಿಗೆ ಬಹುಷಃ ಪುಡಾರಿ ರಾಜಕಾರಣಿಗಳು ಒತ್ತಡ ಹಾಕುವಂತೆ ಕಾಣಿಸುತ್ತಿದೆ.. ಒಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ಪುಡಿ ರೌಡಿಗಳು ಹಾಗೂ ಪುಡಾರಿ ರಾಜಕಾರಣಿಗಳಿಂದ ಗಾಂಜಾ ಹಾವಳಿ ಇದ್ದರು ಸಹ ಏನು ಇಲ್ಲದಂತೆ ಪೊಲೀಸ್ ಇಲಾಖೆ ಇರಬೇಕಾದ ಪರಿಸ್ಥಿತಿ ಕಾಣಿಸುತ್ತಿದೆ..
Tags:
ಕ್ರೈಂ ಸುದ್ದಿ