ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಮೃತದೇಹ ಪತ್ತೆ..! Soraba

ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಮೃತದೇಹ ಪತ್ತೆ..!

ಸೊರಬ : ಸಾಗರ ಅರಣ್ಯ ವಿಭಾಗದ ಸೊರಬ ವಲಯ ವ್ಯಾಪ್ತಿಯ ನೆಲ್ಲೂರು ಸೆಕ್ಷನ್‌ನ ನೆಲ್ಲೂರು ಬೀಟ್ ವ್ಯಾಪ್ತಿಯ ಸಿದ್ಲಿ ಗ್ರಾಮದ ಸರ್ವೇ ನಂ. 13ರ ಜಿಲ್ಲಾ ಅರಣ್ಯ ಪ್ರದೇಶದಲ್ಲಿ ಚಿರತೆಯ ಮೃದೇಹ ಪತ್ತೆಯಾಗಿದೆ.

ಜೂನ್ 10ರಂದು ಪತ್ತೆಯಾದ ಚಿರತೆಯ ಮೃತದೇಹ ಸ್ಥಳಕ್ಕೆ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಪರಿಶೀಲನೆ ವೇಳೆ ಚಿರತೆಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳ ಗುರುತುಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಮೃತ ಚಿರತೆಯ ಮರಣದ ನಿಖರ ಕಾರಣ ತಿಳಿದು ಬರಬೇಕಿರುವ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಾಥಮಿಕ ಮಹಜರು ಹಾಗೂ ನೋಟಿಸ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಮುಂದಿನ ತನಿಖೆಯ ಫಲಿತಾಂಶದ ಆಧಾರದ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. 
Previous Post Next Post