ಸಾರ್ವಜನಿಕರ ಮನವಿಗೆ ಸ್ಪಂದಿಸಿದ ತೀರ್ಥಹಳ್ಳಿ ಪೊಲೀಸರು..!
ತೀರ್ಥಹಳ್ಳಿ : ರಸ್ತೆಯಲ್ಲಿ ಅಡ್ಡ ನಿಲ್ತಾರೆ, ಹೋಗುವ ಬರುವ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡ್ತಾರೆ, ಎಂಬ ಮಾತುಗಳು ಸಹಜವಾಗಿ ಪೋಲೀಸರ ಬಗ್ಗೆ ಕೇಳಿ ಬರುತ್ತದೆ.. ಆದರೆ ಅದು ಅವರ ಕರ್ತವ್ಯ ಎನ್ನುವುದು ಅರ್ಥ ಮಾಡಿಕೊಳ್ಳಬೇಕು.. ಈಗ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸಾರ್ವಜನಿಕರ ಮೆಚ್ಚುಗೆಗೆ ತೀರ್ಥಹಳ್ಳಿ ಪೊಲೀಸರು ಪಾತ್ರರಾಗಿದ್ದಾರೆ..
ಹೌದು ತೀರ್ಥಹಳ್ಳಿ ಸಮೀಪದ ಬಾಳಗಾರು ಕೆರೆಯ ಎದುರು ಇರುವ ತೋಟದ ಕಡೆಯಿಂದ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದಿತ್ತು.. ಸರಿ ಸುಮಾರು ಒಂದು ಘಂಟೆಯಾದರು ಅದರ ಬಗ್ಗೆ ಯಾರು ಗಮನವಹಿಸಿರಲಿಲ್ಲ.. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಇತ್ತೀಚಿಗೆ ಅಪಘಾತವೊಂದು ಆಗಿರುವ ಬಗ್ಗೆ ತಿಳಿಸಿ ಮರ ತೆರವಿಗೆ ಏನಾದರು ಮಾಡಲು ತಿಳಿಸಿದ್ದಾರೆ..
ತಕ್ಷಣವೇ ಸ್ಪಂದಿಸಿದ ತೀರ್ಥಹಳ್ಳಿ ಪೊಲೀಸರು 112 ವಾಹನದ ಚಾಲಕರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜೊತೆಗೆ ಸೇರಿ ಮರವನ್ನು ಕಟಾವು ಮಾಡಿ ರಸ್ತೆಯಲ್ಲಿ ಸುಗಮವಾಗಿ ಓಡಾಟ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.. ತೀರ್ಥಹಳ್ಳಿ ಪೊಲೀಸರ ಸ್ಪಂದನೆಗೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ