ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನದ ಜೊತೆ ಅಂತ್ಯವೂ ಆಗಲಿದೆ - ಚೆನ್ನಬಸಪ್ಪ
ಶಿವಮೊಗ್ಗ: ಡಿ.ಕೆ. ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಯಶಸ್ವಿಯಾಗಲಿ ಎಂದು ನಾವು ಶುಭ ಹಾರೈಸಿದ್ದೆವು. ಆದರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವಷ್ಟರಲ್ಲೇ ಮೊದಲ ವಿಕೆಟ್ ಬಿದ್ದಿದೆ" ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ಒಳಗಿನ ಅಸಮಾಧಾನವನ್ನು ಉಲ್ಲೇಖಿಸಿದ ಅವರು, "ಒಂದೊಂದೇ ವಿಕೆಟ್ ಪತನವಾಗುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ನ ಹೊಲಿಗೆ ಸರಿಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಮನಸ್ಸುಗಳು ಗಟ್ಟಿಯಾಗದೇ ಇದ್ದರೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ" ಎಂದು ಹೇಳಿದರು.
ಇದೇ ವೇಳೆ ದೆಹಲಿ ನಾಯಕರ ಮಧ್ಯಸ್ಥಿಕೆಯ ಮೇಲೂ ಟೀಕೆ ಮಾಡಿದ ಚನ್ನಬಸಪ್ಪ, "ದೆಹಲಿಯಿಂದ ಎಷ್ಟು ನಾಯಕರು ಬಂದರೂ, ಎಷ್ಟು ಗಟ್ಟಿಯಾದ ದಾರದ ಹೊಲಿಗೆ ಹಾಕಿದರೂ ಅದು ಪಟ್ ಅಂತ ಕಿತ್ತುಹೋಗುತ್ತದೆ. ಯಾಕೆಂದರೆ ಒಳಗಿನ ಭಾವನೆಗಳು ಬೇರೆ ಬೇರೆ ಇವೆ" ಎಂದು ಕಿಡಿಕಾರಿದರು.
ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದ ಅವರು, "ರಾಜ್ಯದ ಜನರಿಗೆ ಅನ್ಯಾಯವಾಗದಂತೆ ಸರ್ಕಾರ ನಡೆಸಿ ಎಂದು ಜನರು ಬಹುಮತ ನೀಡಿದ್ದಾರೆ. ಈಗ ಮೊದಲ ವಿಕೆಟ್ ಪತನದಿಂದ ಆರಂಭವಾಗಿದೆ, ಅದರ ಅಂತ್ಯವೂ ಆಗಲಿದೆ. ಡಿ.ಕೆ. ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ಸಂರಕ್ಷಣೆ ಮಾಡಿಕೊಂಡು ರಾಜ್ಯದ ಜನರ ಹಿತ ಕಾಪಾಡಲಿ" ಎಂದು ಹೇಳಿದರು.
Tags:
ಶಿವಮೊಗ್ಗ ಸುದ್ದಿ