ವಿಶ್ವ ಪರಿಸರ ಹಿನ್ನೆಲೆ ಪೊಲೀಸ್ ಇಲಾಖೆಯಿಂದ 5 ಸಾವಿರ ಗಿಡ ನೆಡುವ ಕಾರ್ಯ
ಶಿವಮೊಗ್ಗ : ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನದ ಅಂಗವಾಗಿ ಶಿವಮೊಗ್ಗ ಪೊಲೀಸರು ಆಚರಣೆ ನಡೆಸಿದರು. ಶಿವಮೊಗ್ಗದ ಡಿ ಎ ಆರ್ ಮೈದಾನದಲ್ಲಿ ಆಯೊಜನೆ ಮಾಡಲಾಯಿತು.
ಈ ಭಾರಿ ವಿಶೇಷವಾಗಿ 5 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಮೂಲಕ ಪರಿಸರ ಕಾಳಜಿ ವಹಿಸಲಾಯಿತು. ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಕಾರ್ಯಕ್ರಮದಲ್ಲಿ ಕರೆನೀಡಲಾಯಿತು. ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಬೃಹತ್ ಗಿಡ ನೆಡುವ ಕಾರ್ಯಕ್ರಮದಲ್ಲಿ, ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಕುಮಾರ್, ಹೆಚ್ಚುವರಿ ಅಧೀಕ್ಷಕ ಕಾರ್ಯಪ್ಪ ಕುಮಾರ್, ಡಿಎಆರ್ ಡಿವೈಎಸ್ಪಿ ದಿಲೀಪ್ ಸೇರಿದಂತೆ ಎಲ್ಲಾ ಇನ್ಸ್ಪೆಕ್ಟರ್ , ಪಿಎಸೈಗಳು, ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಎಸ್ ಪಿ ನಿಖಿಲ್ ಬಿ ಅವರು ಈಗ ಎಲ್ಲಿಗೆ ಹೋದರು ಬಿಲ್ಡಿಂಗ್ ಗಳು ಜಾಸ್ತಿ ಆಗುತ್ತಿವೆ ಹೊರತು ಮರಗಳು ಜಾಸ್ತಿ ಆಗುತ್ತಿಲ್ಲ. ಹಾಗಾಗಿ ನಾವು ಒಂದು ಬದಲಾವಣೆ ತರಬೇಕೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ಇಲ್ಲಿ ಇಂದು 1350 ಸಸಿಗಳನ್ನು ನೆಟ್ಟಿದ್ದೇವೆ. ಜಿಲ್ಲಾದ್ಯಂತ ಒಟ್ಟು ಐದು ಸಾವಿರ ಸಸಿಗಳನ್ನು ನೆಡಲಾಗಿದೆ. ಪ್ರತಿಯೊಂದು ಪೊಲೀಸ್ ಕುಟುಂಬವೂ ಸಹ ಗಿಡವನ್ನು ನೆಟ್ಟು ಅದರ ಪೋಷಣೆಯನ್ನು ಮಾಡುತ್ತೇವೆ ಎಂದು ತಿಳಿಸಿದರು..
Tags:
ಶಿವಮೊಗ್ಗ ಸುದ್ದಿ