ತೀರ್ಥಹಳ್ಳಿ ಮೂಲದ ಬರಹಗಾರ ಜಿ ಟಿ ನಂದೀಶ್ ವಿಧಿವಶ !
ತೀರ್ಥಹಳ್ಳಿ : ಬರಹಗಾರು ಹಾಗೂ ಚಲನಚಿತ್ರ ಕಥೆಗಾರರು ಆದ ನಂದೀಶ್ ಜಿ ಟಿ ( 37 ವರ್ಷ ) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತಃ ತೀರ್ಥಹಳ್ಳಿಯ ಮಾಳೂರಿನವರಾಗಿದ್ದು ಕನ್ನಡದ ಹಲವಾರು ಸಿನಿಮಾಗಳಿಗೆ ಹಾಗೂ ಧಾರವಾಹಿಗಳಿಗೆ ಕಥೆ ಬರೆದಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರವಾಹಿಗೆ ಕಥೆಯನ್ನು ಬರೆದಿದ್ದರು. ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಗ್ಯಾಸ್ಟ್ರಿಕ್ ಎಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ವಿಧಿಯಾಟ ಅವರನ್ನು ಮೌನವಾಗಿಸಿತು.
ಇತ್ತೀಚಿಗೆ ನಿಧನರಾದ ನಟ, ನಿರ್ದೇಶಕ ದಿಲೀಪ್ ರಾಜ್ ಅವರ ಜೊತೆಗೆ ಪಾರು ಧಾರವಾಹಿಯಲ್ಲಿ ಕೆಲಸ ನಿರ್ವಹಿಸಿದ್ದರು . ನಂದೀಶ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಹಲವು ಬಾಂಧವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನಂದೀಶ್ ಅವರ ನಿಧನಕ್ಕೆ ನಟ, ನಟಿಯರು, ನಿರ್ದೇಶಕರು, ಬರಹಗಾರರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ..
Tags:
ನಿಧನ ಸುದ್ದಿ