ನಿಮ್ಮ ರಾಜಕಾರಣದ ಹಾದಿಯ ಪ್ರತಿ ನಡಿಗೆಯು ಮುಂದಿನ ಪೀಳಿಗೆಗೆ ಆದರ್ಶವಾಗಿರಲಿ - ಸಿದ್ದರಾಮಯ್ಯನವರ ರಾಜೀನಾಮೆ ಬಗ್ಗೆ ಕಿಮ್ಮನೆ ಮಾತು Kimmane Ratnakar

ನಿಮ್ಮ ರಾಜಕಾರಣದ ಹಾದಿಯ ಪ್ರತಿ ನಡಿಗೆಯು ಮುಂದಿನ ಪೀಳಿಗೆಗೆ ಆದರ್ಶವಾಗಿರಲಿ - ಸಿದ್ದರಾಮಯ್ಯನವರ ರಾಜೀನಾಮೆ ಬಗ್ಗೆ ಕಿಮ್ಮನೆ ಮಾತು 

ತೀರ್ಥಹಳ್ಳಿ : ಕರ್ನಾಟಕ ರಾಜ್ಯದ ಜನಪ್ರಿಯ ನಾಯಕ, ಅಹಿಂದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ  ಅವರ ಮುಂದಿನ ಜೀವನ ಯಶಸ್ಸು ಮಯವಾಗಿರಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶುಭ ಹಾರೈಸಿದ್ದಾರೆ..

ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬರೆದಿರುವ ಕಿಮ್ಮನೆ ರತ್ನಾಕರ್ 
ಸುಧೀರ್ಘ ಕಾಲ ಸಕ್ರಿಯ ರಾಜಕಾರಣ ಮಾಡುವುದು ಒಂದು ತಪಸ್ಸು,, ಟೀಕೆ ಟಿಪ್ಪಣಿ ಹೊಂದಿಸಿಕೊಂಡು ನಡೆಯುವಂತಹ ಹೆಜ್ಜೆ ಅದು ತುಸು ಭಾರವೆ..ಸಮಾಜವಾದ ಚಿಂತನೆಯ ಹೋರಾಟದ ಹಾದಿ ಬಹಳ ಕಠಿಣವಾದ ಹಾದಿ ನಿಷ್ಟೂರತೆ ಎಂಬ ಹಾದಿಯಲ್ಲಿ ಪ್ರತಿ ಹೆಜ್ಜೆಗೆ ಮುಳ್ಳುಗಳೆ ತಾಗ ಸಿಗುತ್ತದೆ, ಸಾರ್ಥಕತೆ ಎಂಬ ಪಾದರಕ್ಷೆಯೊಂದೇ ನಂಬುಗೆಯಲ್ಲಿ ಹಾದಿ ಸಾಗುವ ಸ್ನೇಹಿತ .
ನಿಮ್ಮ ರಾಜಕಾರಣದ ಹಾದಿಯ ಪ್ರತಿ ನಡಿಗೆಯು ಮುಂದಿನ ಪೀಳಿಗೆಗೆ ಆದರ್ಶವಾಗಿರಲಿ, ಮಾದರಿಯಾಗಲಿ ಸ್ಫೂರ್ತಿಯಾಗಲಿ ಎಂದು ತಿಳಿಸಿದ್ದಾರೆ.






Previous Post Next Post