ತೀರ್ಥಹಳ್ಳಿ ತಾಲೂಕಿನಲ್ಲಿ ಗಾಳಿ, ಮಳೆ - ಧರೆಗೆ ಉರುಳಿದ ಅಡಿಕೆ ಮರಗಳು Tth

ತೀರ್ಥಹಳ್ಳಿ ತಾಲೂಕಿನಲ್ಲಿ ಗಾಳಿ, ಮಳೆ - ಧರೆಗೆ ಉರುಳಿದ ಅಡಿಕೆ ಮರಗಳು 

ತೀರ್ಥಹಳ್ಳಿ : ಏಕಾಏಕಿ ಗುರುವಾರ ರಾತ್ರಿ ಮಳೆ ಸುರಿದಿದ್ದು ಮಳೆಯ ಜೊತೆಗೆ ಗುಡುಗು, ಗಾಳಿ ಸಹಿತ ತಾಲೂಕಿನ ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದುಇದರ ಪರಿಣಾಮ ಕೆಲವೆಡೆ ಅಡಿಕೆ ಮರಗಳು ಧರೆಶಾಹಿಯಾಗಿವೆ.

ತಾಲೂಕಿನ ಮಾಳೂರು, ತೂದೂರು, ಮಂಡಗದ್ದೆ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಅನಾಹುತ ಸಂಭವಿಸಿದೆ. ನೂರಾರು ಅಡಿಕೆ ಮರಗಳು ಧರೆಗುರುಳಿದ್ದು ಬೇರೆ ಬೇರೆ ಮರಗಳ ರೆಂಬೆ ಕೊಂಬೆಗಳು ಮುರಿದು  ಬಿದ್ದಿದೆ. ಹಲವು ತೋಟಗಳಲ್ಲಿ ಅಡಿಕೆ ಮರ ಬಿದ್ದಿದ್ದು ರೈತರು ಕಂಗಲಾಗಿದ್ದಾರೆ. 

ಈಗಾಗಲೇ ಎಲೆಚುಕ್ಕೆ ರೋಗ, ಕಾಡು ಪ್ರಾಣಿಗಳ ಹಾವಳಿಯಿಂದ ಕೆಂಗೆಟ್ಟಿರುವ ರೈತರು ಈಗ ಮಳೆಯಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಮಾಳೂರು, ತೂದೂರು, ಮಂಡಗದ್ದೆ ಭಾಗದಲ್ಲಿ ಹಲವಾರು ಅಡಿಕೆ ಮರಗಳು ಮುರಿದು ಬಿದ್ದಿವೆ. 






Previous Post Next Post