ಹಾವು ಕಡಿದು ಎರಡುವರೆ ವರ್ಷದ ಮಗು ಸಾವು..! Sagara

ಹಾವು ಕಡಿದು ಎರಡುವರೆ ವರ್ಷದ ಮಗು ಸಾವು..!

ಸಾಗರ : ಮನೆ ಮುಂದೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿಗೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ  ನಡೆದಿದೆ. ಭವಿನ್ ಮೃತಪಟ್ಟ ಗಂಡು ಮಗು ಎಂದು ತಿಳಿದು ಬಂದಿದೆ.

ಭವಿನ್ ಅಜ್ಜಿಯ ಮನೆ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿದ್ದನು. ಈ ವೇಳೆ ನಾಗರಹಾವು ಬಂದಿದ್ದು ಮಗುವಿನ ಕೈಗೆ ಕಡಿದಿದೆ. ಮಗು ಜೋರಾಗಿ ಅಳುತ್ತಿದ್ದನ್ನು ಕೇಳಿಸಿಕೊಂಡ ಮನೆಯವರು ಮನೆಯಿಂದ ಆಚೆ ಬಂದು ನೋಡಿದಾಗ ಹಾವು ವಾಪಾಸ್ ಹೋಗುತ್ತಿರುವುದನ್ನು ನೋಡಿದ್ದಾರೆ.

ತಕ್ಷಣವೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಿಸದೇ  ಮೃತಪಟ್ಟಿದೆ..








Previous Post Next Post