ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ತೀರ್ಥಹಳ್ಳಿಗೆ ಆಗಮಿಸಿದ್ದರು. ಎನ್ ಆರ್ ಪುರದಲ್ಲಿ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಹಾಗೂ ಹುಲಿಕಲ್ ಘಾಟಿ ನೋಡುವ ಸಲುವಾಗಿ ಆಗಮಿಸಿದ್ದರು. ಈ ವೇಳೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಕೋರಿ ಹಾಗೂ ವಿಶೇಷವಾಗಿ ಕ್ಷೇತ್ರದ ವಿವಿಧ ಭಾಗಗಳಿಗೆ ನೂರಕ್ಕೂ ಹೆಚ್ಚು ಕಾಲುಸಂಕ ನಿರ್ಮಿಸಲು ಅನುದಾನ ಕೋರಿ ಸಚಿವರಿಗೆ ಕೋರಿಕೆ ಪತ್ರ ನೀಡಿದರು. ಮುಂದೆ ಬರುವುದು ಮಳೆಗಾಲ ಸಂದರ್ಭ ಆಗಿರುವುದರಿಂದ ಕಾಲು ಸಂಕದ ಬಗ್ಗೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಕೆಲವು ಕಡೆ ಸಮಸ್ಯೆ ಇದ್ದು ಅದನ್ನು ಸರಿಪಡಿಸಬೇಕು. ಹಾಗಾಗಿ ಅನುದಾನ ನೀಡಬೇಕು ಎಂದು ಆರಗ ಜ್ಞಾನೇಂದ್ರ ಸತೀಶ್ ಜಾರಕಿಹೊಳಿ ಬಳಿ ಪತ್ರ ನೀಡಿ ಮನವಿ ಸಲ್ಲಿಸಿದರು.