ಸಿದ್ದೇಶ್ವರ ಗುಡ್ಡದ ಮೇಲೆ ತುಂಡಾಗಿ ಬಿದ್ದಿರುವ ವಿದ್ಯುತ್ ಕೇಬಲ್ Siddeshvara Betta

ಸಿದ್ದೇಶ್ವರ ಗುಡ್ಡದ ಮೇಲೆ ತುಂಡಾಗಿ ಬಿದ್ದಿರುವ ವಿದ್ಯುತ್ ಕೇಬಲ್ 

ತೀರ್ಥಹಳ್ಳಿ : ಪಟ್ಟಣದ ಬಾಳೇಬೈಲಿನ ಸಿದ್ದೇಶ್ವರ ಗುಡ್ಡದ ಮೇಲ್ಭಾಗದಲ್ಲಿ ವಿದ್ಯುತ್ ಕೇಬಲ್ ಗಳು ತುಂಡಾಗಿ ಬಿದ್ದಿದ್ದು ಈಗಾಗಲೇ 10 ಕ್ಕೂ ಹೆಚ್ಚು ದಿನಗಳು ಕಳೆದಿವೆ. ಈ ವಿಚಾರವಾಗಿ ಇಲಾಖೆಗೆ ಮಾಹಿತಿ ನೀಡಿದರೂ ಸಹ ಇಲ್ಲಿಯವರೆಗೆ ಯಾರೊಬ್ಬರೂ ಬಂದು ಸರಿಪಡಿಸಿಲ್ಲ ಎಂದು ಪ್ರತಿನಿತ್ಯ ವಾಯುವಿಹಾರಕ್ಕಾಗಿ ಹೋಗುವವರು ತಿಳಿಸಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ ಹಲವರು ಸಿದ್ದೇಶ್ವರ ಗುಡ್ಡ ಹತ್ತುತ್ತಾರೆ. ಗುಡ್ಡದ ಮೇಲ್ಭಾಗದಲ್ಲಿ ವಿದ್ಯುತ್ ಕಂಬಗಳು ಇದ್ದು ವಿದ್ಯುತ್ ಕೇಬಲ್ ಗಳು ತುಂಡಾಗಿ ಕೆಳಗಡೆ ಬಿದ್ದಿವೆ. 3 ಫೇಸ್ ಲೈನ್ ಇದಾಗಿದ್ದು ಯಾರಿಗಾದರೂ ಕರೆಂಟ್ ಹೊಡೆದರೆ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಗುಡ್ಡದ ಕಾಡಿನಲ್ಲಿ ಹಲವು ಪ್ರಾಣಿಗಳು ಇವೆ. ಹಾಗಾಗಿ ವಿದ್ಯುತ್ ಕೇಬಲ್ ತುಂಡಾಗಿ ಬಿದ್ದಿರುವುದನ್ನು ತಿಳಿಸಿದ್ದರು ಯಾರು ಇಲ್ಲಿಯವರೆಗೆ ಗಮನಹರಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯಾರಿಗಾದರೂ ಅವಘಡ ಆಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ತುಂಡಾಗಿ ಬಿದ್ದಿರುವ ವಿದ್ಯುತ್ ಕೇಬಲ್ ಸರಿಪಡಿಸಬೇಕಿದೆ..





Previous Post Next Post