ಪತ್ರಕರ್ತ ಓಂಕಾರ್ ತಾಳಗುಪ್ಪ ಇನ್ನಿಲ್ಲ Sagara

ಪತ್ರಕರ್ತ ಓಂಕಾರ್ ತಾಳಗುಪ್ಪ ಇನ್ನಿಲ್ಲ

ಸಾಗರ : ಪತ್ರಕರ್ತ ಓಂಕಾರ್ ತಾಳಗುಪ್ಪ ದೈವಾಧೀನರಾಗಿದ್ದಾರೆ. ಕಿಡ್ನಿ ವೈಫಲ್ಯತೆಯ ಹಿನ್ನಲೆಯಲ್ಲಿ  ಓಂಕಾರ್ ಸಾವನ್ನಪ್ಪಿರುವುದು ತಿಳಿದು ಬಂದಿದೆ. 

ಸದಾ ಬಡವರ ಪರವಾಗಿ , ಬಡವರಿಗೆ ಸೂಕ್ತ ನ್ಯಾಯ ಕೊಡಿಸುವವರೆಗೂ ಶ್ರಮಿಸುತ್ತಿದ್ದ  ಓಂಕಾರ್ ತಾಳಗುಪ್ಪ ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.  ಓಂಕಾರ್ ನಿನ್ನೆ ರಾತ್ರಿ ಕೊನೆ ಉಸಿರು ಎಳೆದಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ. 

ಓಂಕಾರ್ ಅವರ ಅಗಲಿಕೆಗೆ ಜಿಲ್ಲೆಯ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ. 
Previous Post Next Post