ಅಗುಂಬೆ ಪೊಲೀಸ್ ಠಾಣಾ ಆವರಣದಲ್ಲಿ ವಾಹನಗಳ ಹರಾಜು ಪ್ರಕ್ರಿಯೆ Agumbe

ಅಗುಂಬೆ ಪೊಲೀಸ್ ಠಾಣಾ ಆವರಣದಲ್ಲಿ ವಾಹನಗಳ ಹರಾಜು ಪ್ರಕ್ರಿಯೆ 

ಆಗುಂಬೆ : ಮಾನ್ಯ ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ತೀರ್ಥಹಳ್ಳಿ ನ್ಯಾಯಾಲಯದ ಸಿಸಿ ನಂ:02/2022 , ಪಿ.ಆರ್ ನಂ:24/ ರಲ್ಲಿ ಕಂಡ ಪಲ್ಸರ್ ಬೈಕ್
ಹಾಗೂ ಸಿಸಿ ನಂ:43/2018, ಪಿ.ಎಫ್ ನಂ:11/2018 ರಲ್ಲಿ ಕಂಡ ಟಾಟಾ ಏಸ್ ವಾಹನವನ್ನು ಹರಾಜು ಮಾಡಲು ಮಾನ್ಯ ನ್ಯಾಯಾಲಯವು ಆದೇಶ ಮಾಡಿದ್ದು, ಅದರಂತೆ ಸದರಿ ಎರಡೂ ವಾಹನಗಳ ಹರಾಜು ಪ್ರಕ್ರಿಯೆಯನ್ನು ಆಗುಂಬೆ ಪೊಲೀಸ್ ಠಾಣಾ ಆವರಣದಲ್ಲಿ
ದಿನಾಂಕ:14/04/2026 ರಂದು ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಹಮ್ಮಿಕೊಂಡಿರುತ್ತದೆ.

ಆದ್ದರಿಂದ ಸದರಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾರ್ವಜನಿಕರು 5000/-ರೂಗಳನ್ನು ಮುಂಗಡವಾಗಿ ಹಣವನ್ನು ಪಾವತಿಸಿ ಟೋಕನ್ ಪಡೆದು ಹರಾಜಿನಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕೋರಿಕೊಳ್ಳಲಾಗಿದೆ.






Previous Post Next Post