ದ್ವಿತೀಯ ಪಿಯುಸಿ ಫಲಿತಾಂಶ - ಮತ್ತೊಮ್ಮೆ ದಾಖಲೆ ಬರೆದ ವಾಗ್ದೇವಿ ಶಿಕ್ಷಣ ಸಂಸ್ಥೆ
ಈ ಬಾರಿ ವಾಗ್ದೇವಿ ಶಿಕ್ಷಣ ಸಂಸ್ಥೆಗೆ ಐದು ರ‌್ಯಾಂಕ್
ತೀರ್ಥಹಳ್ಳಿ : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ವಾಗ್ದೇವಿ ಶಿಕ್ಷಣ ಸಂಸ್ಥೆ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ದಾಖಲೆ ಬರೆದಿದೆ. ಈ ಬಾರಿ ಒಟ್ಟು ಐದು ರ‍್ಯಾಂಕ್ ಗಳನ್ನು ಪಡೆಯುವ ಮೂಲಕ ತೀರ್ಥಹಳ್ಳಿಗೆ ನಾವೇ ನಂಬರ್ ಒನ್ ಎಂಬುದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ..
ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 2 ರ‌್ಯಾಂಕ್ ಹಾಗೂ 97 ಡಿಸ್ಟಿಂಕ್ಷನ್ ಮೂಲಕ ಶೇ 99% , ಕಾಮರ್ಸ್ ವಿಭಾಗದಲ್ಲಿ 3 ರ‌್ಯಾಂಕ್ ಹಾಗೂ 68 ಡಿಸ್ಟಿಂಕ್ಷನ್ ಪಡೆಯುವ ಮೂಲಕ ಶೇ 100% ರಷ್ಟು ಫಲಿತಾಂಶವನ್ನು ದಾಖಲಿಸಿದ್ದಾರೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದಾರೆ. ವಾಗ್ದೇವಿ ಶಿಕ್ಷಣ ಸಂಸ್ಥೆಯ ಒಟ್ಟು ಐದು ವಿದ್ಯಾರ್ಥಿಗಳು ಸ್ಟೇಟ್ ರ‌್ಯಾಂಕ್ ಪಡೆಯುವ ಮೂಲಕ ನಾವೇ ನಂಬರ್ ಒನ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ರ‌್ಯಾಂಕ್ ಪಡೆದ ವಿದ್ಯಾರ್ಥಿಗಳು
ವಿಜ್ಞಾನ ವಿಭಾಗ
ತೀರ್ಥಹಳ್ಳಿಯ ಮಾಧವ ಹಾಗೂ ಶ್ರೀಮತಿ ದಂಪತಿಗಳ ಪುತ್ರ ಅನಿರುದ್ಧ - 600 ಕ್ಕೆ 592 ಅಂಕ ಪಡೆದಿದ್ದಾರೆ.
ಹಾದಿಗಲ್ಲಿನ ಸುಧೀರ್ ಹಾಗೂ ರಮ್ಯ ದಂಪತಿಗಳ ಪುತ್ರಿ ಸಮಾನ್ವಿತಾ - 600 ಕ್ಕೆ 590 ಅಂಕ ಪಡೆದಿದ್ದಾರೆ.
ಕಾಮರ್ಸ್ ವಿಭಾಗ
ತೀರ್ಥಹಳ್ಳಿಯ ರಾಘವೇಂದ್ರ ನಾಯಕ್ ಹಾಗೂ ಪ್ರಿಯ ದಂಪತಿಗಳ ಪುತ್ರ ಪ್ರತೀಕ್ ನಾಯಕ್ 600 ಕ್ಕೆ 592 ಅಂಕ ಪಡೆದಿದ್ದಾರೆ.
ಶೇಡ್ಗಾರಿನ ದಿನೇಶ್ ಹಾಗೂ ವೀಣಾ ದಂಪತಿಗಳ ಪುತ್ರಿ ಮಂದಾರ- 600 ಕ್ಕೆ 591 ಅಂಕ ಪಡೆದಿದ್ದಾರೆ.
ಸೊಪ್ಪುಗುಡ್ಡೆಯ ಸತೀಶ್ ಹಾಗೂ ಶೋಭಾ ದಂಪತಿಗಳ ಪುತ್ರ ಸಂಜಯ್ - 600 ಕ್ಕೆ 590 ಪಡೆದಿದ್ದಾರೆ.
Tags:
ವಾಗ್ದೇವಿ ಸಂಸ್ಥೆ