ತೀರ್ಥಹಳ್ಳಿಯಲ್ಲಿ ನೈತಿಕ ಪೊಲೀಸ್ ಗಿರಿ - ಅನ್ಯಕೋಮಿನ ಯುವಕರಿಂದ ಹಿಂದೂ ಯುವಕನ ಮೇಲೆ ಹಲ್ಲೆ...!
ತೀರ್ಥಹಳ್ಳಿ : ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದ್ದು ಹಿಂದೂ ಯುವಕನಿಗೆ ಇಬ್ಬರು ಅನ್ಯಕೋಮಿನ ಯುವಕರು ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿ ಥಳಿಸಿದ್ದಾರೆ. ತಕ್ಷಣವೇ ಬಸ್ ನಿಲ್ದಾಣದಲ್ಲಿ ಚಾಲಕರು ಹಾಗೂ ನಿರ್ವಾಹಕರು ಪೊಲೀಸ್ ಗೆ ಮಾಹಿತಿ ನೀಡಿದ್ದಾರೆ.
ಸಾಗರದಿಂದ ತೀರ್ಥಹಳ್ಳಿಗೆ ದಾಖಲೆ ತೆಗೆದುಕೊಳ್ಳಲು ಬಂದಿದ್ದ, ಜೊತೆಗೆ ಆಕೆಯ ಸ್ನೇಹಿತೆ ಕೂಡ ಬಂದಿದ್ದರು. ಇದನ್ನು ನೋಡಿದ ತೀರ್ಥಹಳ್ಳಿ ಇಬ್ಬರು ಅನ್ಯಕೋಮಿನ ಯುವಕರು ಏಕಾಏಕಿ ಮುಖ್ಯ ಬಸ್ ನಿಲ್ದಾಣದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದೊಂದು ನೈತಿಕ ಪೊಲೀಸ್ ಗಿರಿಯಾಗಿದ್ದು ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಿಂದೂಪರ ಕಾರ್ಯಕರ್ತರು ಇದ್ದು ಪ್ರಕರಣದ ವಿರುದ್ಧ ಕುತೂಹಲ ಮೂಡಿಸಿದೆ..
Tags:
ಕ್ರೈಂ ಸುದ್ದಿ