ತಾಲೂಕು ಕಚೇರಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದ ಗ್ರಾಮಸಹಾಯಕ ಸಿಬ್ಬಂದಿಗಳು
ತೀರ್ಥಹಳ್ಳಿ : ತಾಲೂಕು ಕಚೇರಿಯನ್ನು ಇಂದು ಸಂಪೂರ್ಣವಾಗಿ ಸ್ವಚ್ಛತಾ ಕಾರ್ಯವನ್ನು ಗ್ರಾಮಸಹಾಯಕ ಸಿಬ್ಬಂದಿಗಳು ಮಾಡಿದರು. ಇಂದು ಎರಡನೇ ಶನಿವಾರವಾದ ಕಾರಣ ಸರ್ಕಾರಿ ರಜೆ ಇತ್ತು. ಆದರೆ ಆ ರಜೆಯಲ್ಲಿ ತಾಲೂಕು ಕಚೇರಿಯನ್ನು ಸ್ವಚ್ಛತೆ ಮಾಡಲು ಹಲವು ಸಿಬ್ಬಂದಿಗಳು ಆಗಮಿಸಿ ಸ್ವಚ್ಛತಾ ಕಾರ್ಯ ಮಾಡಿದರು.
ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಎಸ್ ಅವರ ಮಾರ್ಗದರ್ಶನದಂತೆ ಆರ್ ಐ ಸುಧೀರ್ ಅವರ ನೇತೃತ್ವದಲ್ಲಿ ಗ್ರಾಮಸಹಾಯಕ ಸಿಬ್ಬಂದಿಗಳು ತಾಲೂಕು ಕಚೇರಿಯನ್ನು ಸ್ವಚ್ಛತೆ ಮಾಡಿದರು. ತಾಲೂಕು ಕಚೇರಿಯಲ್ಲಿ ಡಿ ದರ್ಜೆ ನೌಕರರ ಸಮಸ್ಯೆ ಇರುವ ಕಾರಣ ಗ್ರಾಮಸಹಾಯಕ ಸಿಬ್ಬಂದಿಗಳೆಲ್ಲರು ಒಟ್ಟಾಗಿ ಪ್ರತಿಯೊಂದು ಕೊಠಡಿ, ತಾಲೂಕು ಕಚೇರಿ ಮುಂಭಾಗ ಸೇರಿ ಸ್ವಚ್ಛತಾ ಕಾರ್ಯ ಮಾಡಿದರು.
ಈ ವೇಳೆ ಮಾತನಾಡಿದ ಆರ್ ಐ ಸುಧೀರ್ ಮಾತನಾಡಿ ನಮಗೆ ಈ ಕಚೇರಿ ಅನ್ನವನ್ನು ನೀಡಿದೆ. ಈ ಕಚೇರಿಯನ್ನು ಸ್ವಚ್ಛವಾಗಿ ಇಡುವುದು ನಮ್ಮ ಕರ್ತವ್ಯ, ಈಗ ಎಷ್ಟೋ ಜನರಿಗೆ ಕೆಲಸವಿಲ್ಲ, ಕೆಲಸವಿದ್ದರೂ ಸಹ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಆದರೆ ನಾವು ಇಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಕಚೇರಿಯನ್ನು ಹಾಗೂ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ನಮಗೂ ಕೆಲಸ ಮಾಡಲು ಹಾಗೂ ಸಾರ್ವಜನಿಕರಿಗೂ ಖುಷಿಯಾಗಿ ಇಡುತ್ತದೆ ಹಾಗಾಗಿ ಇಂದು ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ ಎಂದರು.
ಪಟ್ಟಣ ಪಂಚಾಯತ್ ವತಿಯಿಂದ ಕಸದ ವಾಹನ ನೀಡಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಸಹಾಯಕ ಸಿಬ್ಬಂದಿಗಳೆಲ್ಲರೂ ಭಾಗಿಯಾಗಿದ್ದರು..
Tags:
ತೀರ್ಥಹಳ್ಳಿ ಸುದ್ದಿ