ತೀರ್ಥಹಳ್ಳಿಯಲ್ಲಿ ಯಾವುದೇ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ - ತಹಸೀಲ್ದಾರ್ ರಂಜಿತ್ tth

ತೀರ್ಥಹಳ್ಳಿಯಲ್ಲಿ ಯಾವುದೇ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ - ತಹಸೀಲ್ದಾರ್ ರಂಜಿತ್ 

ತೀರ್ಥಹಳ್ಳಿ : ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರಣದಿಂದ ಅಡುಗೆ ಅನಿಲಗಳ ಸಮಸ್ಯೆ ಉಂಟಾಗಿರುವ ಹಿನ್ನಲೆಯಲ್ಲಿ ತಾಲೂಕಿನ ವಿವಿಧ ಹೋಟೆಲ್‌ಗಳು ಹಾಗೂ ಗ್ಯಾಸ್ ಸ್ಟೇಷನ್‌ಗಳಿಗೆ ಭೇಟಿ ನೀಡಿ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೀರ್ಥಹಳ್ಳಿಯಲ್ಲಿ ಸದ್ಯದ ಮಟ್ಟಿಗೆ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ. ಪರಿಶೀಲನೆ ವೇಳೆ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಮತ್ತು ಅಗತ್ಯ ಸರಕುಗಳ ಸಮರ್ಪಕ ಪೂರೈಕೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಮನೆಗಳಿಗೆ ಬಳಸುವ ಗ್ಯಾಸ್ ಸಿಲಿಂಡರ್ ಜೊತೆಗೆ ಹೋಟೆಲ್ ಗಳಲ್ಲಿ ಬಳಸುವ ವಾಣಿಜ್ಯ ಅನಿಲಗಳಿಗೂ ಯಾವುದೇ ಸಮಸ್ಯೆ ಇಲ್ಲ. ಆದರೆ ಹಣ ಹೆಚ್ಚುವರಿಯಾಗಿ ಮಾರಾಟ ಮಾಡುವುದು ಅಥವಾ ಹೋಟೆಲ್ ಗಳಲ್ಲಿ ಮನೆಗಳಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಬಳಸುವುದು ಕಂಡು ಬಂದರೆ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಷ್ಮಾ ಸೇರಿ ಹಲವರು ಇದ್ದರು.





 
Previous Post Next Post