ತೀರ್ಥಹಳ್ಳಿಯಲ್ಲಿ ಆಟೋ ಹಾಗೂ ವೈಟ್ ಬೋರ್ಡ್ ಕಾರುಗಳ ಓಡಾಟ ಬಗ್ಗೆ ಗಮನವಹಿಸದ ಆರ್ ಟಿ ಓ ಇಲಾಖೆ..!?
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಇನ್ನೂರಕ್ಕೂ ಹೆಚ್ಚು ಆಟೋಗಳು ಇದ್ದು ಇದರಲ್ಲಿ ಹಲವು ಆಟೋಗಳಿಗೆ ಲೈಸೆನ್ಸ್ ಆಗಲಿ ಇನ್ಶೂರೆನ್ಸ್ ಆಗಲಿ ಇಲ್ಲ. ಬಾಡಿಗೆ ಎಷ್ಟು ದೂರ ಹೋಗಬೇಕು ಎನ್ನುವುದು ತಲೆ ಬುಡವಿಲ್ಲ ಹಾಗಾಗಿ ಇಂತಹ ಆಟೋಗಳ ವಿಚಾರದಲ್ಲಿ ಪರಿಶೀಲನೆ ನಡೆಸಬೇಕು ಎಂಬುದಾಗಿ ಈಗಾಗಲೇ ಒಂದು ತಿಂಗಳ ಹಿಂದೆ ವರದಿಯಗಿತ್ತು. ಆಟೋ ಚಾಲಕರಿಗೆ ಪ್ರತಿಯೊಂದು ದಾಖಲೆ ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡಲಾಗಿತ್ತು.
ಆದರೆ ಇಲ್ಲಿಯವರೆಗೆ ಯಾವುದೇ ಆಟೋ ಚಾಲಕರು ರಸ್ತೆ ನಿಯಮವನ್ನು ಪಾಲಿಸುತ್ತಿದ್ದಾರೆ ಎಂಬಂತೆ ಕಂಡು ಬಂದಿಲ್ಲ.
ಯಾವುದೇ ಚಾಲಕರು ಯುನಿಫಾರಂ (ಖಾಕಿ ಬಟ್ಟೆ) ಧರಿಸುವುದಿಲ್ಲ.. ಲೈಸೆನ್ಸ್, ಇನ್ಶೂರೆನ್ಸ್ ಕೇಳುವ ಹಾಗೆ ಇಲ್ಲ. ಗಮನಿಸಬೇಕಾದ ಆರ್ ಟಿ ಓ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದು ಹೇಗೆ? ಹೊದ್ದು ಮಲಗುವುದು ಹೇಗೆ? ಎಂಬ ಆಲೋಚನೆ ಅಷ್ಟೇ ಹೊರತು ನಾವು ಅಧಿಕಾರಿಗಳು ಎಂಬುದನ್ನೇ ಮರೆತಂತೆ ಕಾಣಿಸುತ್ತಿದೆ..
ವೈಟ್ ಬೋರ್ಡ್ ಕಾರುಗಳಲ್ಲಿ ಬಾಡಿಗೆ ಮಾಡಲಾಗುತ್ತಿದೆ.
ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಿ ಬಾಡಿಗೆ ಮಾಡುವ ಎಲ್ಲೊ ಬೋರ್ಡ್ ಕಾರುಗಳು ಸ್ಟಾಂಡ್ ಒಳಗೆ ಇದ್ದರೆ ವೈಟ್ ಬೋರ್ಡ್ ಕಾರುಗಳಲ್ಲಿ ಬಾಡಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡ ಆರ್ ಟಿ ಓ ಅಧಿಕಾರಿಗಳು ಗಮನವಹಿಸಿಲ್ಲ. ತೀರ್ಥಹಳ್ಳಿಗೆ 20 ಅಥವಾ ತಿಂಗಳಿಗೊಮ್ಮೆ ಬರುವ ಅಧಿಕಾರಿಗಳು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಯಾರಿಗಾದರೂ ಜೀವಕ್ಕೆ ಹಾನಿಯಾದಾಗ ಕಾನೂನು ಪಾಠ ಮಾಡುವ ಬದಲು ಆರ್ ಟಿ ಓ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕಿದೆ..
Tags:
ತೀರ್ಥಹಳ್ಳಿ ಸುದ್ದಿ