ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರದ್ದೇ ದರ್ಪ..!? ಇಂತಹ ಶಿಕ್ಷಕರ ಅವಶ್ಯಕತೆ ಸಂಸ್ಥೆಗೆ ಬೇಕಾ?
ತೀರ್ಥಹಳ್ಳಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಮುಚ್ಚಲು ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೆಡೆ ಕಾರಣವಾದರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಇರುವ ದರ್ಪ ಹೇಳುವಂತಿಲ್ಲ. ತಮ್ಮದೇ ಶಿಕ್ಷಣ ಸಂಸ್ಥೆ, ತಾವು ಹೇಳಿದ್ದೆ ನಡೆಯುವುದು ಎಂಬಂತೆ ವರ್ತನೆ ಮಾಡುತ್ತಾರೆ. ಈ ರೀತಿ ವರ್ತನೆ ತೀರ್ಥಹಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಯದ್ದು ಆಗಿದೆ.
ಖಾಸಗಿ ಸಂಸ್ಥೆಯಲ್ಲಿ ಓದಿದರೆ ಮಕ್ಕಳು ಚೆನ್ನಾಗಿ ಓದಿ ತೇರ್ಗಡೆ ಹೊಂದುತ್ತಾರೆ ಎಂಬ ಆಸೆ ಪೋಷಕರಿಗೆ ಇರುತ್ತದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದರ್ಪ ಅದರಲ್ಲೂ ತಮ್ಮದೇ ಸಂಸ್ಥೆ ಎನ್ನುವಂತೆ ತೋರಿಸುವ ಅಹಂಕಾರ ಜಾಸ್ತಿ ಆಗುತ್ತಿದೆ. ಶಿಕ್ಷಣ ಸಂಸ್ಥೆಯಲ್ಲಿ ಹಲವು ಶಿಕ್ಷಕರು ಕೆಲಸ ನಿರ್ವಹಿಸುತ್ತಾರೆ. ಸಂಸ್ಥೆಯಲ್ಲಿ ಬಿಲ್ ಬರೆದರೂ ಅಡ್ಡಿ ಇಲ್ಲ ಅವರಿಗೆ ಇರುವ ಅಹಂಕಾರ ಕೆಲವು ಶಿಕ್ಷಕರಿಗೂ ಇರುವುದಿಲ್ಲ. ಇನ್ನು ಕೆಲವು ಶಿಕ್ಷಕರು ಮಕ್ಕಳಿಗೆ ಪಾಠ ಹೇಳುವುದು ಹೌದ ಎನ್ನುವಂತೆ ಅಹಂಕಾರ ತೋರಿಸುತ್ತಾರೆ.
ಮಕ್ಕಳಿಗೆ ಪಾಠ ಹೇಳಿ ಕೊಡಬೇಕಾದ ಶಿಕ್ಷಕರಿಗೆ ಅಹಂಕಾರ, ದರ್ಪ ಒಳ್ಳೆಯದಲ್ಲ. ಇಂತಹ ಶಿಕ್ಷಕರಿಂದ ಸಂಸ್ಥೆಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಇರುತ್ತದೆ. ದರ್ಪ, ಅಹಂಕಾರ ತೋರುವ ಶಿಕ್ಷಕರನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹತೋಟಿಗೆ ತರದೇ ಇದ್ದಲ್ಲಿ ಸಂಸ್ಥೆಗೂ ಕಪ್ಪು ಚುಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಮಕ್ಕಳಿಗೆ ಪಾಠ ಹೇಳಿ ಕೊಡುವ ಶಿಕ್ಷಕರಿಗೂ ಸಂಸ್ಥೆಯಿಂದ ಸಭ್ಯತೆ ವರ್ತನೆ ಬಗ್ಗೆ ಪಾಠ ಆಗಬೇಕಿದೆ..
Tags:
ತೀರ್ಥಹಳ್ಳಿ ಸುದ್ದಿ