ತೀರ್ಥಹಳ್ಳಿ ಪಟ್ಟಣದೊಳಗೆ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದರೆ ಬೀಳುತ್ತೆ ದಂಡ..! tth

ತೀರ್ಥಹಳ್ಳಿ ಪಟ್ಟಣದೊಳಗೆ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದರೆ ಬೀಳುತ್ತೆ ದಂಡ..!

ತೀರ್ಥಹಳ್ಳಿ : ಇಂದಿನಿಂದ ITMS (Intelligent Traffic Management System) ಮೂಲಕ  ವಾಹನ ಸಂಚಾರ ಉಲ್ಲಂಘನೆ, ನಿಷೇಧಿಸಿದ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸುವುದು, ಅಥವಾ ಇತರೆ ಯಾವುದೇ ಉಲ್ಲಂಘನೆಗಳನ್ನು ಕಂಡುಬಂದರೆ ಪೊಲೀಸ್ ಅಧಿಕಾರಿಗಳು ಫೋಟೋ ತೆಗೆದುಕೊಂಡು ನಂತರ ITMS ಮುಖಾಂತರ ಪೋಸ್ಟ್ ಮೂಲಕ ದಂಡದ ಮೊತ್ತದ ಚಲನ್ ಅನ್ನು  ಮಾಲೀಕರಿಗೆ ಕಳುಹಿಸಲಾಗುವುದು.

ವಾಹನ ಸವಾರರು ಇಂದಿನಿಂದ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕಾಗಿ ತೀರ್ಥಹಳ್ಳಿ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ..




Previous Post Next Post