ಆರಗ ಸಮೀಪ ಮರಳು ಲಾರಿಗಳನ್ನು ವಶಕ್ಕೆ ಪಡೆದ ತೀರ್ಥಹಳ್ಳಿ ಪೊಲೀಸರು..! tth

ಆರಗ ಸಮೀಪ ಮರಳು ಲಾರಿಗಳನ್ನು ವಶಕ್ಕೆ ಪಡೆದ ತೀರ್ಥಹಳ್ಳಿ ಪೊಲೀಸರು..!

ತೀರ್ಥಹಳ್ಳಿ : ಅಕ್ರಮವಾಗಿ ಮರಳುಗಾರಿಕೆ ಹಾಗೂ ಮರಳು ಸಾಗಾಟಕ್ಕೆ ಈಗ ತೀರ್ಥಹಳ್ಳಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಆರಗ ಹಾಗೂ ಅರಳಸುರುಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೀರ್ಥಹಳ್ಳಿ ಎಂದರೆ ಅದು ಮರಳು, ಮಣ್ಣು ಗಣಿಗಾರಿಕೆಗೆ ಹೆಸರು ಪಡೆದಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಮರಳು ಮಾಫಿಯ ನಡೆಸುವವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಆಗುಂಬೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲಾಗಿತ್ತು. ಈಗ ತೀರ್ಥಹಳ್ಳಿಯಲ್ಲೂ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್ ಹಾಕಲಾಗುತ್ತಿದೆ.

ಭೂ ಮತ್ತು ಗಣಿ ಇಲಾಖೆಯಿಂದ ಹಲವೆಡೆ ಟ್ರಂಚ್ ಹೊಡೆಯಲಾಗಿದೆ. ಆದರೂ ಪಿಕಪ್ ವಾಹನದಲ್ಲಿ ಮರಳು ಸಾಗಾಟ ಮಾಡಲಾಗುತ್ತಿದ್ದು ಅದರಲ್ಲೂ ಮೇಲಿನಕುರುವಳ್ಳಿ ವ್ಯಾಪ್ತಿಯ ಬುಕ್ಲಾಪುರ, ಹೆನ್ನಂಗಿ ಹಳ್ಳ, ಹುಣಸವಳ್ಳಿ ಮರಳು ಕ್ವಾರೆಯಲ್ಲಿ ಮರಳು ತೆಗೆಯಲಾಗುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಜರುಗಿಸಬೇಕಿದೆ. 





Previous Post Next Post