ಕುವೆಂಪು ರಂಗಮಂದಿರ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
2 ಕೋಟಿಯ 57 ಲಕ್ಷ ವೆಚ್ಚದ ಅಭಿವೃದ್ಧಿಗೆ ಶಂಕುಸ್ಥಾಪನೆ
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುವೆಂಪು ರಂಗಮಂದಿರ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿಯ 57 ಲಕ್ಷ ವೆಚ್ಚದ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಗೋಪಾಲಗೌಡರ ಹೆಸರಲ್ಲಿ ಒಂದು ರಂಗಮಂದಿರ ಇದೆ. ಈಗ ಕುವೆಂಪು ಅವರ ಹೆಸರಿನಲ್ಲಿ ಬಯಲು ರಂಗಮಂದಿರ ಆಗುತ್ತಿದೆ. ಒಟ್ಟು 2ಕೋಟಿ 57 ಲಕ್ಷ ವೆಚ್ಚದಲ್ಲಿ ಹಲವು ಕಾಮಗಾರಿಗೆ ಚಾಲನೆ ದೊರತಿದೆ. ಆದಷ್ಟು ಬೇಗ ಕೆಲಸ ಆಗಲಿ. ಈಗಾಗಲೇ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಆಗುತ್ತಿದೆ.
ಬೇಸಿಗೆ ಬಂದರೆ ಸಾಕು ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿತ್ತು ಆದರೆ ಈಗ 24×7 ನೀರು ಎಲ್ಲರಿಗೂ ಸೌಲಭ್ಯ ಇದೆ. ಅಭಿವೃದ್ಧಿ ಕೆಲಸ ಆಗುವಾಗ ಕೆಲವು ಕಂಟ್ರಾಕ್ಟರ್ ಗಳಿಂದ ಕೆಲಸ ಹಾಳಾಗುತ್ತಿದೆ. ಇಂತಹ ಘಟನೆಗಳು ನಡೆಯಬಾರದು ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಕುವೆಂಪು ಅವರ ನೆನಪಿಗಾಗಿ ಕುವೆಂಪು ಬಯಲು ರಂಗಮಂದಿರ ಆಗುತ್ತಿದೆ. ಲಂಡನ್ ನಲ್ಲಿ ಶೇಕ್ಸ್ ಪಿಯರ್ ಅವರ ರಂಗಮಂದಿರ ನೋಡಿದ್ದೇ ಬಹಳ ಚೆಂದವಿದೆ. ಹಾಗೆ ಇಲ್ಲೂ ಸಹ ಮಾಡಬೇಕು. ಪಕ್ಷವನ್ನು ಬಿಟ್ಟು ಕೆಲಸ ಮಾಡಬೇಕು.
ತಾಲೂಕಿನಲ್ಲಿ ಹಲವಾರು ಕಾಮಗಾರಿಗಳು ಆಗುತ್ತಿವೆ.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲ ಆಗುವಂತೆ ಕೆ ಎಂ ಎಫ್ ವತಿಯಿಂದ ಸ್ಟಾಲ್ ಹಾಗೆ ಕೋರ್ಟ್ ಆವರಣದಲ್ಲಿ ವಾಹನ ಪಾರ್ಕಿಂಗ್ ಮಾಡಲು ಶೇಡ್ ಹಾಗೂ ಸ್ಟಾಲ್ ಮಾಡಬೇಕು ಎಂದಿದ್ದಾರೆ ಅದು ಸಹ ಶೀಘ್ರದಲ್ಲಿ ಆಗಲಿದೆ ಎಂದರು..
ಪ. ಪಂ ಉಪಾಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿ ನೀರಿನ ನಿಧಿ ಯೋಜನೆ ಅಡಿಯಲ್ಲಿ 1 ಕೋಟಿ 20 ಲಕ್ಷ ವೆಚ್ಚದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನೀರಿನ ನಿಧಿ ಯೋಜನೆಯ ಹಣವನ್ನು ಬೇರೆ ಯಾವುದಕ್ಕೂ ಬಳಸಲು ಆಗಿರಲಿಲ್ಲ ಈಗ ಬಳಸಿಕೊಳ್ಳಲಾಗಿದೆ. ರಾಷ್ಟ್ರ ಕವಿ ಕುವೆಂಪು ಅವರ ಹೆಸರನ್ನು ಶಾಶ್ವತವಾಗಿ ಇರಿಸುವ ಸಲುವಾಗಿ ಕುವೆಂಪು ಬಯಲು ರಂಗಮಂದಿರ ಆಗುತ್ತಿರುವುದು ಸಂತೋಷವಾಗುತ್ತಿದೆ ಎಂದರು..
ಯಾವೆಲ್ಲಾ ಕಾಮಗಾರಿಗಳಿಗೆ ಶಂಕು ಸ್ಥಾಪನೆ
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ನಿಧಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು (1 ಕೋಟಿ 20 ಲಕ್ಷ)
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಪ್ಪಗುಡ್ಡೆಯಲ್ಲಿರುವ ಸಾಂಸ್ಕೃತಿಕ ಮೈದಾನದಲ್ಲಿ "ಕುವೆಂಪು ಬಯಲು ರಂಗಮಂದಿರ" ನಿರ್ಮಾಣ ಮಾಡಲು ಹಾಗೂ ಮೈದಾನದ ಸುತ್ತ ರಿಟೈನಿಂಗ್ ವಾಲ್ ಮತ್ತು ರಂಗಮಂದಿರಕ್ಕೆ ವಿದ್ಯುತೀಕರಣ ನಿರ್ಮಾಣ ಕಾಮಗಾರಿ (80 ಲಕ್ಷ)
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟಮಕ್ಕಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಬಾಳೇಬೈಲು ನೀರು ಶುದ್ದೀಕರಣ ಕೇಂದ್ರ ಸ್ಥಾವರಕ್ಕೆ 11 ಕೆ.ವಿ ಎ.ಬಿ ಕೇಬಲ್ (Express Line) ಅಳವಡಿಸುವ ಕಾಮಗಾರಿ (32.20 ಲಕ್ಷ)
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ-14 ರ ಕುರುವಳ್ಳಿಯಲ್ಲಿ ವಾಟರ್ ಟ್ಯಾಂಕ್ ನಿರ್ಮಾಣ (25 ಲಕ್ಷ)
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮುಖ್ಯಧಿಕಾರಿ ನಾಗರಾಜ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸದಸ್ಯರು ಇದ್ದರು.
Tags:
ತೀರ್ಥಹಳ್ಳಿ ಸುದ್ದಿ