ಪಿ.ಎಂ.ಶ್ರಿ ಹಿರೇಗದ್ದೆ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ Hiregadde school

ಪಿ.ಎಂ.ಶ್ರಿ ಹಿರೇಗದ್ದೆ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

ತೀರ್ಥಹಳ್ಳಿ : ಮಕ್ಕಳಿಗೆ ಬರೀ ವಿಜ್ಞಾನದ ಬಗ್ಗೆ ಹೇಳುವುದಕ್ಕಿಂತ ಪ್ರಾಯೋಗಿಕವಾಗಿ ತೋರಿಸಿದ ವಿಷಯಗಳು ಮನಸ್ಸಿನಲಿ ಹೆಚ್ಚಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನದ ಸಣ್ಣ ಪುಟ್ಟ ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು. 

ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಿ.ಎಂ.ಶ್ರೀ ಹಿರೇಗದ್ದೆ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ಪಠ್ಯ ವಿಷಯ,  ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ವಿಜ್ಞಾನ ಮಾದರಿ ತಯಾರಿಕೆ, ವೈಜ್ಞಾನಿಕ ಉಪಕರಣಗಳ ಪರಿಚಯ ಮತ್ತು ಸರಳ ಪ್ರಯೋಗಗಳನ್ನ ಮಾಡಿ ತೋರಿಸಲಾಯಿತು. ಮಕ್ಕಳು ತಾವೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು  ಅದರ ಉಪಯೋಗ ಮತ್ತು ಕಾರ್ಯವೈಖರಿಯಯನ್ನು ಪ್ರದರ್ಶಿಸಿದರು.

ಈ ವರ್ಷದ ವಿಜ್ಞಾನ ದಿನಾಚರಣೆಯಲ್ಲಿ‌ ಮಹಿಳೆಯರ ಸಹಭಾಗಿತ್ವ ದ ಅಂಶವನ್ನು ಅರಿತು ಅನೇಕ ಭಾರತೀಯ ಹಾಗೂ ವಿಶ್ವದ ಮಹಿಳಾ ವಿಜ್ಞಾನಿಗಳ ಪರಿಚಯ ಹಾಗೂ ಭಾವಚಿತ್ರ ಪ್ರದರ್ಶನ ಹಾಗೂ ಭಾರತೀಯ ಪ್ರಾಚೀನ ವಿಜ್ಞಾನಿಗಳ ಭಾವಚಿತ್ರ ಪ್ರದರ್ಶನ ಮತ್ತು ಅವರು ಸಂಶೋಧಿಸಿದ ವಿಷಯಗಳ ಕುರಿತು ಪ್ರೊಜೆಕ್ಟರ್ ಮೂಲಕ  ವಿಜ್ಞಾನ ಶಿಕ್ಷಕರಾದ ಮಂಜುನಾಥ್ ಕೆ. ಆರ್ ಅವರು ಮಕ್ಕಳಿಗೆ ತಿಳಿಸಿದರು. ಮಕ್ಕಳಿಗೆ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಗೆ ಬೇಕಾಗುವ ಪ್ರಶ್ನೆಗಳನ್ನು ಕೇಳಲಾಯಿತು.

ಈ ಸಂದರ್ಭದಲ್ಲಿ ಸಿ ಆರ್ ಪಿ ಮಾಲಾ , ಎಸ್ ಡಿಎಂಸಿ ಅಧ್ಯಕ್ಷರಾದ ಉಮೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯಾದ ಲೀಲಾವತಿ ಹಾಗೂ ಸರ್ವ ಶಿಕ್ಷಕರು ಉಪಸ್ಥಿತರಿದ್ದರು. ಒಟ್ಟಾರೆಯಾಗಿ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಕಲಿಕೆಗೆ ಮುಖ್ಯ ವೇದಿಕೆ ಕಲ್ಪಿಸಿಕೊಟ್ಟಿತು.




Previous Post Next Post