ತೀರ್ಥಹಳ್ಳಿಯಲ್ಲಿ ಮಳೆ ಹಾನಿ ಸ್ಥಳಗಳಿಗೆ ತಹಸಿಲ್ದಾರ್ ಭೇಟಿ..! tth Rain Effect

ತೀರ್ಥಹಳ್ಳಿಯಲ್ಲಿ ಮಳೆ ಹಾನಿ ಸ್ಥಳಗಳಿಗೆ ತಹಸಿಲ್ದಾರ್ ಭೇಟಿ..!

ತೀರ್ಥಹಳ್ಳಿ :  ಸೋಮವಾರ ರಾತ್ರಿ ಸುರಿದ ಭಾರೀ ಮಳೆಯ ಅವಾಂತರದಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಂಬ, ಮರ ಬಿದ್ದು ಮನೆಗಳಿಗೆ ಹಾನಿಯಾಗಿದ್ದು ಇಂತಹ ಸ್ಥಳಗಳಿಗೆ ತಹಸಿಲ್ದಾರ್  ರಂಜಿತ್ ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು..

ಬಾಳೆಬೈಲಿನ ಕೆಲವು ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು ಮಳೆಯಿಂದ ಅಥವಾ ಪ್ರಕೃತಿ ವಿಕೋಪ ಸಂಬಂಧ ಯಾವುದೇ ಸಹಾಯ ಅಗತ್ಯವಿದ್ದಲ್ಲಿ, ಸಾರ್ವಜನಿಕರು ತಮ್ಮ ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು.. ಹಾಗೆಯೇ ಮಳೆಯಿಂದ ಹಾನಿಗೊಳಗಾದವರಿಗೆ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.

ಈ ವೇಳೆ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಕಚೇರಿ ಸಿಬ್ಬಂದಿಗಳು ಭಾಗಿಯಾಗಿದ್ದರು.






Previous Post Next Post