ತೀರ್ಥಹಳ್ಳಿಯಲ್ಲಿ ಶಾಲಾ ವಾಹನಗಳ ಬಗ್ಗೆ ಗಮನವಹಿಸದ ಪೊಲೀಸ್ ಇಲಾಖೆ..!?
ತೀರ್ಥಹಳ್ಳಿ : ಶಾಲಾ ವಾಹನಗಳು, ಆಟೋ, ಕಾರುಗಳಲ್ಲಿ ಮಕ್ಕಳನ್ನು ಬೇಕಾಬಿಟ್ಟಿಯಾಗಿ ತುಂಬಿಕೊಂಡು ಹೋಗುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಯಾಕೆ? ಎಂಬುದಾಗಿ ಸಾರ್ವಜನಿಕರು ಪ್ರೆಶ್ನಿಸಿದ್ದಾರೆ.
ಆಟೋ ಹಾಗೂ ಕಾರುಗಳಲ್ಲಿ ಶಾಲಾ ಮಕ್ಕಳನ್ನು ಲಗೇಜ್ ತುಂಬುವ ರೀತಿಯಲ್ಲಿ ತುಂಬಲಾಗುತ್ತಿದೆ. ಕನಿಷ್ಠ 10 ಮಕ್ಕಳು ಆದರೆ ಸರಿ 15 ಕ್ಕೂ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಹೋಗಲಾಗುತ್ತಿದೆ. ರಸ್ತೆಯಲ್ಲಿ ಹೋಗುವಾಗ ಆಟೋ ಅಥವಾ ಕಾರುಗಳು ವಾಲಿಕೊಂಡು ಹೋಗುವುದು ಕಂಡು ಬರುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಇನ್ನು ಖಾಸಗಿ ಶಾಲಾ ವಾಹನಗಳಲ್ಲೂ ಪರಿಶೀಲನೆ ನಡೆಸಬೇಕಿದೆ. ಖಾಸಗಿ ಶಾಲೆಯ ಬಸ್ ಗಳಲ್ಲಿ ನಿರ್ವಾಹಕರು ಇರಲೇಬೇಕು. ಹಾಗೆ ಸಿಸಿಟಿವಿ ಇರಬೇಕು ಎಂಬುದಾಗಿ ಇದೆ. ಆದರೆ ತೀರ್ಥಹಳ್ಳಿಯಲ್ಲಿ ಓಡಾಟ ನಡೆಸುವ ಖಾಸಗಿ ಶಾಲೆಯ ಬಸ್ ಗಳಲ್ಲಿ ಇದ್ಯಾವುದು ಇಲ್ಲ. ಇನ್ನು ಶಾಲೆಗೆ ಬರುವಾಗ ಹಾಗೂ ಹೋಗುವಾಗ ಕೆಲವು ಬಸ್ ಗಳು ಅತ್ಯಂತ ವೇಗವಾಗಿ ಚಾಲನೆ ಮಾಡುತ್ತಿದ್ದು ಬಸ್ ಒಳಗೆ ಮಕ್ಕಳು ಇರುತ್ತಾರೆ ಎಂಬುದನ್ನು ಮರೆತು ಬೇಜವಾಬ್ದಾರಿಯಾಗಿ ವಾಹನ ಓಡಿಸುತ್ತಿದ್ದಾರೆ ಹಾಗಾಗಿ ಈ ಬಗ್ಗೆ ಸಹ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ