ಕುಡುಮಲ್ಲಿಗೆ ಸಮೀಪ ರಸ್ತೆ ಮಧ್ಯೆ ಪಲ್ಟಿಯಾದ ಭತ್ತದ ಕೊಯ್ಲು ಯಂತ್ರ Kudumallige

ಕುಡುಮಲ್ಲಿಗೆ ಸಮೀಪ ರಸ್ತೆ ಮಧ್ಯೆ ಪಲ್ಟಿಯಾದ ಭತ್ತದ ಕೊಯ್ಲು ಯಂತ್ರ 

ತೀರ್ಥಹಳ್ಳಿ : ತಾಲೂಕಿನ ಕುಡುಮಲ್ಲಿಗೆ ಸಮೀಪ ಟ್ರಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಭತ್ತ ಕಟಾವು ಮಾಡುವ ಯಂತ್ರವೊಂದು ಆಕಸ್ಮಿಕವಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ರಸ್ತೆಯಲ್ಲಿ ಕೆಲಕಾಲ ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಯಿತು.

ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಈ ಭತ್ತದ ಮಿಷನ್  ಟ್ರಾಕ್ಟರ್ ಮೂಲಕ ಸಾಗಿಸಲಾಗುತ್ತಿತ್ತು. ಚಲಿಸುತ್ತಿದ್ದ ಸಂದರ್ಭದಲ್ಲಿ  ಆಕಸ್ಮಿಕವಾಗಿ  ಯಂತ್ರವು ರಸ್ತೆಯ ಮಧ್ಯಭಾಗದಲ್ಲೇ ಪಲ್ಟಿಯಾಗಿದೆ. 

ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ವಾಹನ ಸವಾರರು ಜಮಾಯಿಸಿದ್ದು, ನಂತರ  ಯಂತ್ರವನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.






Previous Post Next Post