ತೀರ್ಥಹಳ್ಳಿಯಲ್ಲೂ ವಾಣಿಜ್ಯ ಅನಿಲಗಳ ಬೆಲೆ ಹೆಚ್ಚಳ - ಹೋಟೆಲ್ ಮಾಲೀಕರ ಬೇಸರ! Gas Problem

ತೀರ್ಥಹಳ್ಳಿಯಲ್ಲೂ ವಾಣಿಜ್ಯ ಅನಿಲಗಳ ಬೆಲೆ ಹೆಚ್ಚಳ - ಹೋಟೆಲ್ ಮಾಲೀಕರ ಬೇಸರ!

ತೀರ್ಥಹಳ್ಳಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ. ಅಂತರಾಷ್ಟ್ರೀಯ ಮಟ್ಟದ ಸಂಘರ್ಷದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಅನಿಲದ ಅಭಾವ ಸೃಷ್ಟಿಯಾಗಿದ್ದು ಈಗ ತೀರ್ಥಹಳ್ಳಿಯಲ್ಲಿ ಹೋಟೆಲ್‌ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಗಳಲ್ಲಿ ಬಳಸುವ ವಾಣಿಜ್ಯ ಅನಿಲ ರೂ 1750 ಕ್ಕೆ ಸಿಗುತ್ತಿತ್ತು. ಸರ್ಕಾರ ಹೆಚ್ಚಳ ಮಾಡಿದ ಕಾರಣ ರೂ 1900 ಆಗಿತ್ತು. ಆದರೆ ಈಗ ಯುದ್ಧದ ಕಾರ್ಮೋಡದಿಂದಾಗಿ ವಾಣಿಜ್ಯ ಅನಿಲಗಳ ದರ ಬರೋಬ್ಬರಿ ರೂ 3000 ಆಗಿದೆ.  ನಾವು ಅಷ್ಟೊಂದು ಹಣ ನೀಡಿ ಗ್ಯಾಸ್ ಪಡೆದುಕೊಂಡರು ವ್ಯಾಪಾರ ಮಾಡಲು ಕಷ್ಟವಾಗುತ್ತದೆ. ಸರ್ಕಾರ ಗ್ಯಾಸ್ ಇದೆ ಎಂದು ಹೇಳಿದ್ದರು ಸಹ ಇಲ್ಲಿ ದುಬಾರಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನವಹಿಸಬೇಕು ಎಂದು ಮನವಿ ಮಾಡಿದರು.

ಕಳೆದ ಎರಡು ದಿನಗಳಿಂದ ವಾಣಿಜ್ಯ ಅನಿಲಗಳಿಗೆ ಬೇಡಿಕೆ ಹೆಚ್ಚಾಗಿದ್ದು ಕಾಳಸಂತೆಯಲ್ಲಿ ದುಬಾರಿ ಹಣಕ್ಕೆ ಮಾರಾಟವಾಗುತ್ತಿದೆ. ಈಗಾಗಲೇ ಹೋಟೆಲ್ ಗಳಲ್ಲಿ ಹಲವು ತಿಂಡಿಗಳನ್ನು ನಿಲ್ಲಿಸಲಾಗಿದೆ. ಹೀಗೆ ಮುದುವರೆದರೆ ಹೋಟೆಲ್ ಮುಚ್ಚಬೇಕಾಗುತ್ತದೆ. ಇಂದು ಗ್ಯಾಸ್ ಕೇಳಿದರೆ ರೂ 3000 ಎಂದು ಹೇಳುತ್ತಿದ್ದಾರೆ. ಹೀಗಾದರೆ ವ್ಯಾಪಾರ ಮಾಡುವುದು ಹೇಗೆ ಎಂದು ಕೊಪ್ಪ ಸರ್ಕಲ್ ನಲ್ಲಿ ಹೋಟೆಲ್ ಮಾಲೀಕರೊಬ್ಬರು ಪ್ರೆಶ್ನೆ ಮಾಡಿದರು.

ಈಗಾಗಲೇ ಬೆಂಗಳೂರು, ಮಂಗಳೂರು ಶಿವಮೊಗ್ಗ ಭಾಗದಲ್ಲಿ ಶೇ 70 ರಷ್ಟು ಹೋಟೆಲ್ ಬಂದ್ ಆಗಿವೆ. ಇನ್ನುಳಿದ ಕಡೆ ಸೌದೆ ಉಪಯೋಗಿಸಿ ಅಡಿಗೆ ಮಾಡಲಾಗುತ್ತಿದೆ. ಈಗ ತೀರ್ಥಹಳ್ಳಿಯಲ್ಲೂ ವಾಣಿಜ್ಯ ಅನಿಲಗಳ ಸಮಸ್ಯೆ ಎದುರಾಗಿದ್ದು ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.. 






Previous Post Next Post