ಲಾರಿ- ಬೈಕ್ ಅಪಘಾತ- ದಂಪತಿಗಳು ಸ್ಥಳದಲ್ಲೇ ಸಾವು
ಭದ್ರಾವತಿ: ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿಗಳಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಂಕರಘಟ್ಟದ ಬಿ ಆರ್ ಪಿ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ದಂಪತಿಗಳನ್ನ ಬಾಬು(31) ಸಾವಿತ್ರಿ (25) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಹೊಟೆಲ್ ವೊಂದರಲ್ಲಿ ದಂಪತಿಗಳು ಕೆಲಸ ಮಾಡುತ್ತಿದ್ದರು.
ಮದುವೆ ಆಗಿ ಒಂದೂವರೆ ವರ್ಷ ಕಳೆದಿದ್ದ ದಂಪತಿಗಳ ಜೀವನ ರಸ್ತೆ ಅಪಘಾತದಲ್ಲಿ ಕೊನೆಗೊಂಡಿದೆ.
ಒಂದುವರೆ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಬಾಬು ಮತ್ತು ಸಾವಿತ್ರಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Tags:
ಅಪಘಾತ ಸುದ್ದಿ