ವೈಟ್ ಬೋರ್ಡ್ ಕಾರುಗಳಲ್ಲಿ ಬಾಡಿಗೆ ಮಾಡುತ್ತಿರುವ ಚಾಲಕರು..! White Board Car

ವೈಟ್ ಬೋರ್ಡ್ ಕಾರುಗಳಲ್ಲಿ ಬಾಡಿಗೆ ಮಾಡುತ್ತಿರುವ ಚಾಲಕರು..!

ತೀರ್ಥಹಳ್ಳಿ : ಆಟೋ ಕಥೆ ಆಯಿತು ಈಗ ಕಾರುಗಳ ಕಥೆ. ಬಾಡಿಗೆ ಮಾಡುವ ಕಾರುಗಳೇ ಬೇರೆ ಅವುಗಳಿಗೆ ಹಳದಿ ಬಣ್ಣದ ಬೋರ್ಡ್ ಅಳವಡಿಕೆ ಮಾಡಲಾಗಿರುತ್ತದೆ. ಸ್ವಂತ ವಾಹನಗಳಿಗಾಗಿ ಬಿಳಿ ಬಣ್ಣದ ಬೋರ್ಡ್ ಇರುತ್ತದೆ. ಆದರೆ ತೀರ್ಥಹಳ್ಳಿಯಲ್ಲಿ ವೈಟ್ ಬೋರ್ಡ್ ಕಾರುಗಳಲ್ಲಿ ಬಾಡಿಗೆ ಮಾಡುತ್ತಿದ್ದು ಈ ವಿಚಾರವಾಗಿ ಹಲವಾರು ದೂರುಗಳು ಕೇಳಿ ಬರುತ್ತಿವೆ.

ತೀರ್ಥಹಳ್ಳಿಯಲ್ಲಿ ಸ್ವಂತ ವಾಹನಗಳಲ್ಲಿ ಬಾಡಿಗೆ ಮಾಡುತ್ತಿದ್ದು ಅಲ್ಲದೆ ಅವರದ್ದೇ ಆದ ಸ್ಟಾಂಡ್ ಕೂಡ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ಕೂಡ ನೀಡಲಾಗಿದೆ. ಅಷ್ಟೇ ಅಲ್ಲದೆ ಶಾಲಾ ಮಕ್ಕಳನ್ನು ಸಹ ವೈಟ್ ಬೋರ್ಡ್ ಗಳಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ ಅದರಲ್ಲೇ ಮಕ್ಕಳ ಬಾಡಿಗೆ ಮಾಡಲಾಗುತ್ತಿದೆ.  ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಳದಿ ಬೋರ್ಡ್ ಹಾಗೂ ಬಿಳಿ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಮಾಡುವವರನ್ನು ಪರಿಶೀಲಿಸಿ ಯಾವುದೇ ದಾಖಲೆ ಇಲ್ಲದ ವಾಹನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. 


Previous Post Next Post