ತೀರ್ಥಹಳ್ಳಿಯಲ್ಲಿ ಲೈಸೆನ್ಸ್ ಇಲ್ಲದೆ ಓಡಾಟ ನಡೆಸುತ್ತಿವೆ ಆಟೋಗಳು..! Ato with out Lisence

ತೀರ್ಥಹಳ್ಳಿಯಲ್ಲಿ ಲೈಸೆನ್ಸ್ ಇಲ್ಲದೆ ಓಡಾಟ ನಡೆಸುತ್ತಿವೆ ಆಟೋಗಳು..!
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಇನ್ನೂರಕ್ಕೂ ಹೆಚ್ಚು ಆಟೋಗಳು ಇದ್ದು ಇದರಲ್ಲಿ ಹಲವು ಆಟೋಗಳಿಗೆ ಲೈಸೆನ್ಸ್ ಆಗಲಿ ಇನ್ಶೂರೆನ್ಸ್ ಆಗಲಿ ಇಲ್ಲ. ಬಾಡಿಗೆ ಎಷ್ಟು ದೂರ ಹೋಗಬೇಕು ಎನ್ನುವುದು ತಲೆ ಬುಡವಿಲ್ಲ ಹಾಗಾಗಿ ಇಂತಹ ಆಟೋಗಳ ವಿಚಾರದಲ್ಲಿ ಪರಿಶೀಲನೆ ನಡೆಸಬೇಕಿದೆ.

ಮುಖ್ಯ ಬಸ್ ನಿಲ್ದಾಣ, ಕೊಪ್ಪ ಸರ್ಕಲ್, ಆಗುಂಬೆ ಬಸ್ ನಿಲ್ದಾಣ, ಕುರುವಳ್ಳಿ, ಮೇಲಿನಕುರುವಳ್ಳಿ, ಬಾಳೆಬೈಲು, ಹೀಗೆ ಹಲವು ಕಡೆ ಆಟೋ ನಿಲ್ದಾಣ ಇದೆ. ಎಲ್ಲಡೆ ಸೇರಿ ಇನ್ನೂರಕ್ಕೂ ಹೆಚ್ಚು ಆಟೋಗಳು ಇವೆ. ಎಷ್ಟೋ ಆಟೋಗಳು ಲೈಸೆನ್ಸ್ ಇಲ್ಲದೆ, ಇನ್ಶೂರೆನ್ಸ್ ಇಲ್ಲದೆ, ಓಡಾಟ ನಡೆಸುತ್ತಿವೆ. ಇನ್ನು ಚಾಲಕರ ಖಾಕಿ ಬಟ್ಟೆ ಕೇಳುವುದೇ ಬೇಡ... ಹಣ ಮಾಡಲು ಆಟೋ ಓಡಿಸುವಂತೆ ಕೆಲವರು ಓಡಿಸುತ್ತಿದ್ದಾರೆ. ಇಷ್ಟೇ ಕಿ.ಮೀ ಪ್ರಯಾಣ ಮಾಡಬೇಕು ಎಂದು ಇದ್ದರು ಅದರ ಬಗ್ಗೆ ಯಾವುದೇ ಲಿಮಿಟ್ ಇಲ್ಲದಂತೆ ಓಡಿಸುತ್ತಿದ್ದಾರೆ. 

ನಾಲೂರು ಬಳಿ ನಡೆದಿರುವ ಅಪಘಾತಕ್ಕೂ ಇಂತಹ ಬೇಜವಾಬ್ದಾರಿತನವೇ ಕಾರಣವಾಗಿದೆ. ಈ ಕೂಡಲೇ ತೀರ್ಥಹಳ್ಳಿಯಲ್ಲಿರುವ ಎಲ್ಲಾ ಆಟೋಗಳನ್ನು ಪರಿಶೀಲನೆ ನಡೆಸಿ ಇನ್ನು ಮುಂದೆ ಪ್ರತಿಯೊಬ್ಬ ಚಾಲಕ ಖಾಕಿ ಬಟ್ಟೆ ಹಾಕಿಯೇ ಓಡಿಸುವಂತೆ ಅಧಿಕಾರಿಗಳು ತಾಕಿತು ಮಾಡಬೇಕಿದೆ. ಅಷ್ಟೇ ಅಲ್ಲದೆ ಲೈಸೆನ್ಸ್ ಇನ್ಶೂರೆನ್ಸ್ ಇಲ್ಲದ ಆಟೋವನ್ನು ವಶಕ್ಕೆ ಪಡೆಯಬೇಕಿದೆ..


Previous Post Next Post