ಮಹಾಶಿವರಾತ್ರಿ ಪ್ರಯುಕ್ತ ತೀರ್ಥಹಳ್ಳಿಯಲ್ಲಿವಿವಿಧ ದೇವಸ್ಥಾನಗಳಲ್ಲಿ ಕಾರ್ಯಕ್ರಮ- ಏನೆಲ್ಲಾ ಇರುತ್ತೆ? shivaratri

ಮಹಾಶಿವರಾತ್ರಿ ಪ್ರಯುಕ್ತ ತೀರ್ಥಹಳ್ಳಿಯಲ್ಲಿವಿವಿಧ ದೇವಸ್ಥಾನಗಳಲ್ಲಿ ಕಾರ್ಯಕ್ರಮ- ಏನೆಲ್ಲಾ ಇರುತ್ತೆ?
ತೀರ್ಥಹಳ್ಳಿ : ಮಹಾ ಶಿವರಾತ್ರಿ ಅಂಗವಾಗಿ ಭಾನುವಾರ ಹಾಗೂ ಸೋಮವಾರದಂದು ತೀರ್ಥಹಳ್ಳಿಯ ವಿವಿಧ ಈಶ್ವರ
ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ,
ಉತ್ಸವಗಳು ನಡೆಯಲಿದೆ.

ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪಂಚಾಮೃತ
ಅಭಿಷೇಕ, ಶತ ರುದ್ರಾಭಿಷೇಕ, ಸಹಸ್ರ ನಾರಿಕೇಳ ಅಭಿಷೇಕ,
ಹೋಮ, ಹಾಗೂ ನಾಳೆ ಸಂಜೆಯಿಂದ ಅಖಂಡ ಭಜನಾ
ಕಾರ್ಯಕ್ರಮ ಇರಲಿದೆ. ಬಾಳೆಬೈಲಿನ ಸಿದ್ದೇಶ್ವರ ಗುಡ್ಡದ ಮೇಲೆ ನೆಲೆ ನಿಂತಿರುವ ಸಿದ್ದೇಶ್ವರ ಸ್ವಾಮಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ರುದ್ರಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ..

ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿ ಇರುವ ಗೌರಿ ಶಂಕರ
ದೇವಸ್ಥಾನದಲ್ಲಿ 108 ನಾರಿಕೇಳ ಅಭಿಷೇಕ, ಕ್ಷೀರಾಭಿಷೇಕ,
ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವ ಅರ್ಚನೆ, ಶ್ರೀ ರುದ್ರ ಪಾರಾಯಣ, ಸಾಮೂಹಿಕ ಭಜನೆ, ಸೇರಿ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಕಿತ್ತನಗದ್ದೆ ಸಾಂಬಾಸದಾಶಿವ ಮತ್ತು ಮಹಿಷಿಮರ್ದಿನಿ
ದೇವಸ್ಥಾನದಲ್ಲಿ ರುದ್ರಾಭಿಷೇಕ, ಏಕದಶ ರುದ್ರಾಭಿಷೇಕ, ಚಂಡಿಕಾಯಾಗ, ಜಾಗರಣೆ ಅಂಗವಾಗಿ ಅಖಂಡ ಭಜನೆ, 

ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕೃಪಾ ಪೋಷಿತ ಶ್ರೀ ಕ್ಷೇತ್ರ ಸುರಾಲು ಕೊಕ್ಕರಣೆ ಇವರಿಂದ ವನದುರ್ಗ ಪರಮೇಶ್ವರಿ ಮಹಿಮೇ ಶ್ರೀ ಕಾಜ್ರಳ್ಳಿ ಕ್ಷೇತ್ರ ಮಹಾತ್ಮೆ ಎಂಬ ಕಥಾ ಭಾಗ  ವಿವಿಧ ಕಾರ್ಯಕಮ ನಡೆಯಲಿದೆ.



Previous Post Next Post