ಭದ್ರಾವತಿಯ ಸ್ವಾತಿ ಆತ್ಮಹತ್ಯೆ ಪ್ರಕರಣ | ವಾಟ್ಸಪ್ ಕೊನೆಯ ಚಾಟ್’ನಲ್ಲಿ ಏನಿದೆ? bhadravati

ಭದ್ರಾವತಿಯ ಸ್ವಾತಿ ಆತ್ಮಹತ್ಯೆ ಪ್ರಕರಣ | ವಾಟ್ಸಪ್ ಕೊನೆಯ ಚಾಟ್’ನಲ್ಲಿ ಏನಿದೆ?

ಪೊಲೀಸರಿಗೆ ತಾಯಿ ನೀಡಿದ ದೂರಿನಲ್ಲಿ ಏನಿದೆ? ಸಾವಿಗೆ ತೀರ್ಥಹಳ್ಳಿಯ ಪೋಲೀಸಪ್ಪನೇ ಕಾರಣವೇ?

ಭದ್ರಾವತಿ  : ಪತಿ ಆತ್ಮಹತ್ಯೆ ಮಾಡಿಕೊಂಡ ಒಂದೇ ವಾರದಲ್ಲಿ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಭದ್ರಾವತಿಯಲ್ಲಿ ನಡೆದಿದ್ದು, ಈ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯಲ್ಲಿ ಸ್ವಾತಿ(26) ಎಂದು ಗುರುತಿಸಲಾಗಿದೆ. 

ಕೆಎಸ್’ಐಎಫ್’ಎಸ್`ನಲ್ಲಿ ಡಿ ದರ್ಜೆ ನೌಕರರಾಗಿದ್ದ ಜಗದೀಶ್ ಎನ್ನುವವರು ಶಿವರಾತ್ರಿ ದಿನದಂದು ಮನೆಯಲ್ಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವು ಎಂದು ದೂರು ದಾಖಲಾಗಿತ್ತು. ಇದಾದ ಒಂದು ವಾರದಲ್ಲೇ ಜಗದೀಶ್ ಪತ್ನಿ ಸ್ವಾತಿ ಅವರೂ ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸ್ವಾತಿ ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್ ನಲ್ಪಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ. ಇವರ ಆತ್ಮಹತ್ಯೆಯ ವೇಳೆ ಸ್ವಾತಿ ಮೈಮೇಲೆ ತಾಳಿ, ಮತ್ತು ಇತರೆ ಚಿನ್ನಾಭರಣವನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ. ತೀರ್ಥಹಳ್ಳಿ ಮಾಳೂರು ಪೊಲೀಸ್ ಠಾಣೆಯೊಂದರಲ್ಲಿ ದಫೇದಾರ್ ಆಗಿದ್ದವರೊಬ್ಬರು ಸ್ವಾತಿಗೆ `ನಿನ್ನ ಪತಿ’ ಸಾವಿಗೆ ನೀನೆ ಕಾರಣ ಎಂದು ಆರೋಪಿಸಿರುವುದನ್ನು ಉಲ್ಲೇಖಿಸಿ ತನ್ನ ತಾಯಿಗೆ ಮೆಸೇಜ್ ಮಾಡಿರುವುದು ಈಗ ಸಂಚಲನ ಉಂಟು ಮಾಡಿದೆ.  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊನೆಯ ವಾಟ್ಸಪ್ ಚಾಟ್’ನಲ್ಲಿ ಏನಿದೆ? 

ಮೃತರ ತಾಯಿ ನೀಡಿದ ದೂರಿನಲ್ಲಿ ಏನಿದೆ? 

ಪ್ರಕರಣ ಕುರಿತಂತೆ ಮೃತ ಸ್ವಾತಿ ತಾಯಿ ನ್ಯೂ ಟೌನ್ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ದೂರಿನ ಸಾರಾಂಶ ಹೀಗಿದೆ. ನನಗೆ ಒಂದು ಗಂಡು ಮಗ ಸಂಜಯ್ ಮತ್ತು ಒಬ್ಬಳು ಹೆಣ್ಣು ಮಗಳಾದ ಸ್ವಾತಿ ಇದ್ದು ಇವಳನ್ನು ಭದ್ರಾವತಿ ಹೊಸ ಸಿದ್ದಾಪುರ ವಾಸಿಯಾದ ಜಗದೀಶ ಬಿನ್ ಪುಟ್ಟೇಗೌಡ ಇವರಿಗೆ 2019ರಲ್ಲಿ ಮದುವೆ ಮಾಡಿಕೊಟ್ಟಿದ್ದು ಅವರ ದಾಂಪತ್ಯ ಜೀವನದ ಫಲವಾಗಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ಹೀಗಿರುವಾಗ ನನ್ನ ಅಳಿಯ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಕುಡಿಯವ ಚಟ ಕಲಿತಿದ್ದು ಇದಕ್ಕೆ ಕಾರಣ ನಮ್ಮ ಮಗಳ ಕುಟುಂಬದ ಬಗ್ಗೆ ಪೋಲೀಸ್ ಪೇದೆಯಾದ ಮೋಹನ್ ರವರು ಅಪಪ್ರಚಾರ ಮಾಡಿದ್ದು ಇದರಿಂದ ಮನ ನೊಂದು ನನ್ನ ಅಳಿಯ ದಿನಾಂಕ:14-02-2026ರAದು ರಾತ್ರಿ 9.30 ಗಂಟೆ ಸಮಯದಲ್ಲಿ ನೇಣು ಹಾಕಿಕೊಂಡು ಹೊಸ ಸಿದ್ದಾಪುರದಲ್ಲಿ ಮೃತರಾಗಿರುತ್ತಾರೆ. ಈತನ ಸಾವಿನ ಬಗ್ಗೆ ನಮಗೆ ಸಮಗ್ರ ಮಾಹಿತಿ ಇಲ್ಲದ ಕಾರಣ ಯಾವುದೇ ದೂರು ನೀಡದೇ ಪಿ.ಎಂ ವರದಿಯಾದ ನಂತರ ಶವ ಸಂಸ್ಕಾರ ಮಾಡಿರುತ್ತೇವೆ. ಹೀಗಿರುವಾಗ ನನ್ನ ಮಗಳು ಸ್ವಾತಿ ಹೊಸ ಸಿದ್ದಾಪುರದ ಗಂಡ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಆರೋಪಿತ ಪೋಲೀಸ್ ಪೇದೆ ಮೋಹನ್ ನನ್ನ ಮಗಳ ಬಗ್ಗೆ ಅಪಪ್ರಚಾರ ಮಾಡಿದ್ದು ಅಲ್ಲದೇ ಫೋನ್ ಮುಖೇನ ನನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ. 

ಈ ವಿಚಾರವಾಗಿ ಅವಳು ಜೀವಂತವಿರುವಾಗ ನನಗೆ ವಿಷಯ ತಿಳಿಸಿದ್ದಳು. ಆಗ ನಾನು ನನ್ನ ಗಂಡ ಜಯರಾಮ್ ಅವಳಿಗೆ ಸಮಾಧಾನ ಹೇಳಿದ್ದೆವು. 20-02-2026ರಂದು ನನಗೆ ಬೆಳಿಗ್ಗೆ ಮೋಹನ್ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಜನಗಳ ಮುಂದೆ ಅಪಪ್ರಚಾರ ಮಾಡಿರುವ ಬಗ್ಗೆ ಈ ವಿಷಯದ ಹಿನ್ನೆಲೆಯಲ್ಲಿ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅಲ್ಲದೇ ನನ್ನ ಮಗಳಿಗೆ ಬ್ಲಾಕ್ಮೇಲ್ ಮಾಡಿ ನನ್ನ ಮಗಳ ಮೊಬೈಲ್’ಗೆ ಆರೋಪಿ ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನನಗೆ ವಿಷಯ ತಿಳಿಸಿದ್ದಳು. ನನ್ನ ಮಗಳು ಮಾನಸಿಕ ನೊಂದಿರುತ್ತಾಳೆ ಅಲ್ಲದೇ ಆರೋಪಿ ನನ್ನ ಮಗಳಿಗೆ ಧಮ್ಮಿ ಹಾಕಿ ನಾನು ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ದೂರು ಕೊಟ್ಟರೇ ಏನು ಮಾಡಲು ಸಾಧ್ಯವಿಲ್ಲ. ನಾನು ಹೇಳಿದಂತೆ ಕೇಳಿದರೆ ನಿನ್ನ ಬದುಕು ಸರಿಯಾಗುತ್ತದೆಂದು ಬೆದರಿಕೆ ಹಾಕಿರುವ ಬಗ್ಗೆ ಸಹ ನನ್ನ ಮಗಳು ನನಗೆ ಹೇಳಿದ್ದಳು.

ನನ್ನ ಮೊಬೈಲ್’ಗೆ ಮೆಸೇಜ್ ಮಾಡಿ ಮೋಹನ್ ಕಿರುಕುಳ ನೀಡಿದ್ದು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಮಗಳು ಸ್ವಾತಿ ಭದ್ರಾವತಿ ತಾ ಹೊಸಸಿದ್ದಾಪುರದ ಗಂಡನ ಮನೆಯಲ್ಲಿ ನನ್ನ ಮಗಳು ನನ್ನ ಮೊಬೈಲ್’ಗೆ ಮೆಸೇಜ್ ಹಾಕಿ ಕಾರಣ ತಿಳಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ನಾನು ಸ್ಥಳಕ್ಕೆ ಹೋಗಿ ನೋಡಿದಾಗಿ ನನ್ನ ಮಗಳು ಮೃತರಾಗಿದ್ದಳು. ನನ್ನ ಮಗಳ ಸಾವಿಗೆ ಕಾರಣರಾದ ಪೋಲೀಸ್ ಪೇದೆ ಮೋಹನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವಳು ಆತ್ಮಹತ್ಯೆ ಮಾಡಿಕೊಳ್ಳವಂತೆ ಅಪಪ್ರಚಾರ ಮಾಡಿ ಬ್ಲಾಕ್ಮೇಲ್ ಮಾಡಿ, ಲೈಂಗಿಕ ಕಿರುಕುಳ ನೀಡಿ, ದುಷ್ಟೇರಣೆ ಮಾಡಿರುವ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಉಲ್ಲೇಖಿಸಿದ್ದಾರೆ. 




Previous Post Next Post