ಸೀಬಿನಕೆರೆ ಶಾಲೆ ಎದುರು ಅನಾಮಧೇಯ ಜಲ್ಲಿ ರಾಶಿ..! tth

ಸೀಬಿನಕೆರೆ ಶಾಲೆ ಎದುರು ಅನಾಮಧೇಯ ಜಲ್ಲಿ ರಾಶಿ..!
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾಗರ ರಸ್ತೆಯ ಸೀಬಿನಕೆರೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಎದುರು ರಸ್ತೆಗೆ ತಾಗಿಕೊಂಡು ಜಲ್ಲಿಪುಡಿ ರಾಶಿಯೊಂದು ಐದಾರು ತಿಂಗಳಿನಿಂದ ಹಾಕಿದ್ದು ಇದಕ್ಕೆ ವಾರಸುದಾರರೇ ಇಲ್ಲವೆಂದು ಅಕ್ಕಪಕ್ಕದ ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಆದರೆ ಈ ಜಲ್ಲಿಯ ರಾಶಿಯಿಂದ ಶಾಲಾ ಮಕ್ಕಳಿಗೆ ಕೆಲವು ತಿಂಗಳಿನಿಂದ ನಿತ್ಯ ಸಮಸ್ಯೆ ಆಗುತ್ತಿದ್ದು ಒಂದೆರೆಡು ಬಾರಿ ಅಪಘಾತ ಸಹ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನಿಸಿ ಸೂಕ್ತ ಕ್ರಮ ಕೈಗೊಂಡು ಜಲ್ಲಿ ರಾಶಿ ತೆರವು ಮಾಡಿ ಯಾವದಾದರೂ ಅವಘಡ ಆಗುವ ಮುಂಚೆ ಜಾಗೃತರಾಗಲಿ ಎನ್ನುವ ಉದ್ದೇಶ ಈ ವರದಿಯದ್ದಾಗಿದೆ.
Previous Post Next Post