ತುಂಗಾ ನದಿಯಲ್ಲಿ ವ್ಯಕ್ತಿ ಶ*ವ ಪತ್ತೆ..! tth

ತುಂಗಾ ನದಿಯಲ್ಲಿ ವ್ಯಕ್ತಿ ಶವ ಪತ್ತೆ..!

ತೀರ್ಥಹಳ್ಳಿ : ಗುರುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದ ವ್ಯಕ್ತಿ ಶವ ಹುಣಸವಳ್ಳಿ ಸಮೀಪದ ತುಂಗಾ ನದಿಯಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ವಸಂತ (31 ವರ್ಷ) ಸಾವನ್ನಪ್ಪಿದ ವ್ಯಕ್ತಿ. ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗಿದ್ದವನು ವಾಪಾಸ್ ಆಗಿರಲಿಲ್ಲ. ಆದರೆ ಇಂದು ಹುಣಸವಳ್ಳಿ ಬಳಿ ಚಪ್ಪಲಿ ಇರುವುದು ಕಂಡು ಬಂದಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.

ವಸಂತ್ ಸಾವಿನ ಬಗ್ಗೆ ಹಲವು ವಿಚಾರಗಳು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
Previous Post Next Post