ದಿ. ಬೆನಕಭಟ್ಟರ ಧರ್ಮಪತ್ನಿ ವಿಶಾಲಾಕ್ಷಮ್ಮ ನಿಧನ : ಶಾಸಕ ಜ್ಞಾನೇಂದ್ರ ಕಂಬನಿ tth

ದಿ. ಬೆನಕಭಟ್ಟರ ಧರ್ಮಪತ್ನಿ ವಿಶಾಲಾಕ್ಷಮ್ಮ ನಿಧನ : ಶಾಸಕ ಜ್ಞಾನೇಂದ್ರ ಕಂಬನಿ 
ತೀರ್ಥಹಳ್ಳಿ: ನಮ್ಮನ್ನು ಮತ್ತು ನಮ್ಮ ಸಂಘಟನೆಯನ್ನು ಬೆಳಿಸಿದ್ದು ಮಾತ್ರವಲ್ಲ ಈ ಕ್ಷೇತ್ರದಲ್ಲಿ ರಾಷ್ಟ್ರೀಯತೆಯನ್ನು ಗಟ್ಟಿಯಾಗಿ  ಬಿತ್ತಿ ಬೆಳೆಸಿದ, ನನ್ನ ಭದುಕಿನ ಪೂರ್ಣ ಮಾರ್ಗದರ್ಶಕರಾದ ಪರಮ ಪೂಜೆನಿಯ ದಿವಂಗತ ಬೆನಕ ಭಟ್ಟರ ಧರ್ಮ ಪತ್ನಿ ವಿಶಾಲಾಕ್ಷಮ್ಮನವರು ಇಂದು ನಿಧನರಾಗಿದ್ದು ಶಾಸಕ ಆರಗ ಜ್ಞಾನೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಮನೆಯ ದೇವರ ಕೋಣೆಯವರೆಗೂ ದಲಿತರು ಸೇರಿದಂತೆ ಎಲ್ಲಾ ಸಮಾಜ ಬಂದುಗಳನ್ನು ಮುಕ್ತವಾಗಿ ಬರುವಂತೆ ಮಾಡಿ ನೈಜ ಜಾತ್ಯಾತೀತ ಮನೆಯನ್ನಾಗಿಸಿ ಎಲ್ಲಾ ಕಾರ್ಯಕರ್ತರಿಗೆ ಮಾದರಿ ಬದುಕು ಬದುಕಿದವರು ಬೆನಕ ಭಟ್ಟರು, ಅವರ ಚಿಂತನೆಗಳಿಗೆ ಪೂರಕವಾಗಿ ಕೇರಳದ ಸಂಘದ ಮನೆಯಿಂದ ಚಕ್ಕೊಡಬೈಲಿಗೆ  ಬಂದು ಸಾಮಾಜಿಕ ಕಾರ್ಯದ ಮನೆಯಾಗಿ ಪರಿವರ್ತಿಸಿದ, ನೂರಾರು ಭಾರಿ ನಮ್ಮೆಲ್ಲ ಕಾರ್ಯಕರ್ತರಿಗೆ ಅನ್ನಪೂರ್ಣೇಯಂತೆ ಊಟ ಹಾಕಿದ ವಿಶಾಲಾಕ್ಷಮ್ಮನವರ ಅಗಲುವಿಕೆ ತೀವ್ರ ದುಃಖ ತಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ
Previous Post Next Post