ಸಹ್ಯಾದ್ರಿ ಐಸಿಎಸ್‌ಇ ಶಾಲೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ Sahyadri

ಸಹ್ಯಾದ್ರಿ ಐಸಿಎಸ್‌ಇ ಶಾಲೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ
ತೀರ್ಥಹಳ್ಳಿ : ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗದವರನ್ನು ಆಡಳಿತ ಮಂಡಳಿಯವರು ಅಭಿನಂದಿಸಿ ಸನ್ಮಾನಿಸಿರುತ್ತಾರೆ.

ಡಿಸೆಂಬರ್ 10, 2025 ರಂದು ಮುಂಬೈನ NESCO ದಲ್ಲಿ ನಡೆದ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಸಹ್ಯಾದ್ರಿ ICSE ಶಾಲೆಗೆ “Best School - Karnataka “ ಎಂಬ
ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ಪ್ರಾಂಶುಪಾಲರು ಮತ್ತು ಸಿಬ್ಬಂದಿ
ವರ್ಗದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಪುರಸ್ಕರಿಸಿರುತ್ತಾರೆ. 

ಈ ಸಮಾರಂಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೂಳೂರು ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಲೋಕೇಶ್ ಎಸ್.ವಿ., ಕಾರ್ಯದರ್ಶಿಗಳಾದ ಆದರ್ಶ್ ಹೆಚ್‌.ಎಂ., ಖಜಾಂಚಿಗಳಾದ ಶಶಿಧರ್ ಎಂ ಆರ್, ಹಿರಿಯ ನಿರ್ದೇಶಕರುಗಳಾದ ಬಾಳೇಹಳ್ಳಿ ಪ್ರಭಾಕರ್, ಸುಜಿನಿ ಟಿ.ಗೌಡ, ಕೆ.ಸಿ ವೀರೇಂದ್ರ, ಸುಧೀರ್ ಬಿ.ವಿ., ಧನ್ಯ ಅಶ್ವಲ್, ಸಂದೀಪ್ ಕುಡುಮಲ್ಲಿಗೆ, ಆಡಳಿತಾಧಿಕಾರಿಯಾದ ಪ್ರಕಾಶ ಜಿ.ಎನ್. ಹಾಗೂ ಸಹ್ಯಾದ್ರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗ್ನೆಸ್ ಮೆಂಡೋನ್ಸಾ ಹಾಗೂ ಸಹ್ಯಾದ್ರಿ ಕಾಂಪೋಸಿಟ್ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್‌ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜಗದೀಶ್ ಜಿ.ಕೆ ರವರು ಸಮಾರಂಭವನ್ನು ಉದ್ದೇಶಿಸಿ ಮಾತಾನಾಡಿ ಈ ಪ್ರಶಸ್ತಿಯನ್ನು ಪಡೆಯುವಲ್ಲಿ ಸಂಸ್ಥೆಯು ಬೆಳೆದು ಬಂದ ಹಾದಿ, ಎಲ್ಲಾ ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತೋರಿದ ಸಾಧನೆಗಳನ್ನು ಸ್ಕಲಿಸಿ ಈ ಯಶಸ್ಸಿಗೆ
ಕಾರಣರಾದ ಪ್ರತಿಯೊಬ್ಬರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.
Previous Post Next Post