ಸ್ವಂತ ಖಾತೆಗೆ ಟಿಕೆಟ್ ಮೊತ್ತ: ಬಸ್‌ ನಿರ್ವಾಹಕರ ಕುತಂತ್ರ! bus

ಸ್ವಂತ ಖಾತೆಗೆ ಟಿಕೆಟ್ ಮೊತ್ತ: ಬಸ್‌ ನಿರ್ವಾಹಕರ ಕುತಂತ್ರ!

ತೀರ್ಥಹಳ್ಳಿ: ತಮ್ಮ ಸ್ವಂತ ಬ್ಯಾಂಕ್‌ ಖಾತೆಗೆ ಪ್ರಯಾಣಿಕರಿಂದ ಟಿಕೆಟ್ - ಹಣ ಹಾಕಿಸಿಕೊಳ್ಳುತ್ತಿದ್ದಾರೆ, ಯುಪಿಐ ಸ್ಕ್ಯಾನರ್ ಟಿಕೆಟ್ ವ್ಯವಸ್ಥೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಪ್ರಯಾಣಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ಕೆ ಎಸ್ ಆರ್ ಟಿ ಸಿ ಸಂಸ್ಥೆ ಚಿಲ್ಲರೆ ಸಮಸ್ಯೆ ಪರಿಹಾರದ ಭಾಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನರನ್ನು ಪ್ರತಿ ಬಸ್ ಗಳಲ್ಲಿ ಅಳವಡಿಸಿದೆ. ಆದರೆ, ಈ ನಿರ್ವಾಹಕರು ಟಿಕೆಟ್ ನೀಡುವಾಗ, ಅಧಿಕೃತವಾದ ಯುಪಿಐ ಸ್ಕ್ಯಾನರ್ ಬಳಸದೆ ತಮ್ಮ ವೈಯಕ್ತಿಕ ಯುಪಿಐ ಖಾತೆಗೆ ಸಾವಿರಾರು ರೂಪಾಯಿ ಟಿಕೆಟ್ ಮೊತ್ತವನ್ನು ಪಾವತಿಸಿಕೊಂಡು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಮಾತು ಪ್ರಯಾಣಿಕರು ತಿಳಿಸಿದ್ದಾರೆ.

ತೀರ್ಥಹಳ್ಳಿಯಿಂದ ಶಿವಮೊಗ್ಗ ಹೋಗುವ ಹಲವು ಬಸ್ ಗಳಲ್ಲಿ ಈ ರೀತಿ ಸಮಸ್ಯೆ ಬಗ್ಗೆ ದೂರು ಕೇಳಿ ಬಂದಿದೆ. ಮೊದಲಿಗೆ ಸ್ಕ್ಯಾನರ್ ಗೆ ಹಣ ಹಾಕಿಸಿಕೊಳ್ಳುವುದು ಆ ನಂತರ ಹಣ ಬಂದಿಲ್ಲ ಎಂದು ಪ್ರಯಾಣಿಕರ ಕೈಯಿಂದ ಮತ್ತೊಮ್ಮೆ ಹಣ ತೆಗೆದುಕೊಳ್ಳುವುದು. ಸ್ಕ್ಯಾನರ್ ಮಾಡಿದ ಹಣ ನಿಮಗೆ ವಾಪಸ್ ಬರುತ್ತದೆ ಎಂದು ಸಾಬೂಬು ನೀಡುವುದನ್ನು ಬಸ್ ನಿರ್ವಾಹಕರು ಮಾಡುತ್ತಿದ್ದಾರೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿ ಬಂದಿದೆ.

ಶಕ್ತಿ ಯೋಜನೆ ಹೆಸರಿನಲ್ಲಿ (ಮಹಿಳೆಯರಿಗೆ ಬಸ್ ನಲ್ಲಿ ಉಚಿತ) ಆಗಿದೆ. ಇದರಿಂದ ನಿರ್ವಾಹಕರಿಗೆ ಚಿಲ್ಲರೆ ಕಾಸು ಹೊಡೆದು ತಿನ್ನಲು ಆಗುವುದಿಲ್ಲ ಹಾಗಾಗಿ ಹೊಸದಾಗಿ ಕುತಂತ್ರ ಆರಂಭಿಸಿದ್ದು
ಇದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ  ಈ ಬಗ್ಗೆ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ.
Previous Post Next Post